ಆರ್.ಜಿ.ಪಿ.ಆರ್.ಎಸ್ ಸಂಘಟನೆ ವತಿಯಿಂದ ರಾಜೀವ್ ಗಾಂಧಿ, ದೇವರಾಜ್ ಅರಸು ಜನ್ಮದಿನಾಚರಣೆ

Spread the love

ಆರ್.ಜಿ.ಪಿ.ಆರ್.ಎಸ್ ಸಂಘಟನೆ ವತಿಯಿಂದ ರಾಜೀವ್ ಗಾಂಧಿ, ದೇವರಾಜ್ ಅರಸು ಜನ್ಮದಿನಾಚರಣೆ

ಉಡುಪಿ: ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ರವರ ಜನ್ಮ ದಿನಾಚರಣೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.

ರಾಜೀವ್ ಗಾಂಧಿಯವರ ಜನ್ಮ ದಿನದ ಪ್ರಯುಕ್ತ ಉಡುಪಿ ನೇಜಾರು ನಲ್ಲಿರುವ ಸ್ಪಂದನ ದಿವ್ಯಾoಗರ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿ ದಿನೊಪಯೋಗಿ ವಸ್ತುಗಳನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಸದಸ್ಯರಾದ ವೇರೋನಿಕಾ ಕರ್ನಲಿಯೋ, ಜಿಲ್ಲಾ ಕಾಂಗ್ರೆಸ್ ಕಾರ್ಯಧಕ್ಷರಾದ ಕಿಶನ್ ಹೆಗ್ಡೆ, ಪ್ರಚಾರ ಸಮಿತಿ ಅಧ್ಯಕ್ಷರಾದ ಹರೀಶ್ ಕಿಣಿ, ಹಿರಿಯ ಕಾಂಗ್ರೆಸ್ ನಾಯಕರಾದ ನಾಗೇಶ್ ಉದ್ಯಾವರ, ಮಹಾಬಲ ಕುಂದರ್, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷರಾದ ದಿನಕರ ಹೆರೂರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು, ಮತ್ತು ಬ್ರಹ್ಮಾವರ ಬ್ಲಾಕ್ ನ ಸಂಯೋಜಕರಾದ ಸೂರ್ಯ ಸಾಲ್ಯಾನ್ ಬೈಂದೂರು ಬ್ಲಾಕ್ ಸಂಯೋಜಕರಾದ ಶಾಂತಿ ಪಿರೇರಾ ಕುಂದಾಪುರ ಬ್ಲಾಕ್ ನ ರೋಷನ್ ಬ್ಯಾರೆಟ್ಟೋ, ಕಾರ್ಕಳ ಬ್ಲಾಕ್ ನ ಬಾನು ಭಾಸ್ಕರ್, ಸಂಘಟನೆಯ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯ ಕರ್ತರು ಉಪಸ್ಥಿತರಿದ್ದರು

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕರಾದ ಆನಂದ ಪೂಜಾರಿ, ಕೊಡೇರಿ ಸ್ವಾಗತಿಸಿದರು, ಸಹ ಸಂಯೋಜಕರಾದ ಸತೀಶ್ ಜಪ್ತಿ ಧನ್ಯವಾದ ಸಮರ್ಪಿಸಿದರು, ಪ್ರಧಾನ ಕಾರ್ಯದರ್ಶಿ ಅಮೃತ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಣೆ ಮಾಡಿದರು


Spread the love
Subscribe
Notify of

0 Comments
Inline Feedbacks
View all comments