ಆಳ್ವಾಸ್ ನಲ್ಲಿ ನಾಲ್ಕನೇ ಬಾರಿಯ ಸಿ.ಎನ್.ಸಿ. ತಾಂತ್ರಿಕ ಕಾರ್ಯಾಗಾರ

Spread the love

ಆಳ್ವಾಸ್ ನಲ್ಲಿ ನಾಲ್ಕನೇ ಬಾರಿಯ ಸಿ.ಎನ್.ಸಿ. ತಾಂತ್ರಿಕ ಕಾರ್ಯಾಗಾರ

ಆಳ್ವಾಸ್ ತಾಂತ್ರಿಕ ವಿದ್ಯಾಲಯದ ಯಾಂತ್ರಿಕ ವಿಭಾಗದ ಆಶ್ರಯದಲ್ಲಿ ನಾಲ್ಕನೇ ಬಾರಿಯ 7 ದಿನಗಳ ಸಿ.ಎನ್.ಸಿ (ಲೇತ್, ಮಿಲ್ಲಿಂಗ್) ಕಾರ್ಯಾಗಾರ ಮತ್ತು ತರಬೇತಿಯನ್ನು ದಿನಾಂಕ 11/12/2017 ರಿಂದ 18/12/2017 ರವರೆಗೆ ಡಿಪ್ಲೋಮ ಮತ್ತು ಐ.ಟಿ.ಐ. ವಿದ್ಯಾರ್ಥಿಗಳಿಗೆ ನಡೆಸಲಾಯಿತು.

ಈ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ ವಿ ಸುರೇಶ್ ರವರು ಕಳೆದ ಬಾರಿಯ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಈ ತರಬೇತಿಯು ಹೇಗೆ ಉದ್ಯೋಗಾವಕಾಶ ಒದಗಿಸಿದೆ ಏಂದು ತಿಳಿಸಿದರು. ಈ ಕಾರ್ಯಾಗಾರದಲ್ಲಿ ಪ್ರೊ. ಹೇಮಂತ್ ಸುವರ್ಣ, ಪ್ರೊ. ಪ್ರಮೋದ್ ಕುಮಾರ್ ಎನ್. ಹಾಗೂ ಪ್ರೊ. ಶ್ರೀನಿವಾಸರವರು ಉತ್ತಮವಾಗಿ ತರಬೇತಿಯನ್ನು ಕೊಟ್ಟಿರುತ್ತಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಜ್ಞಾನವನ್ನು ವಿಸ್ತರಿಸಬೇಕು ಎಂದು ತಿಳಿಸಿದರು. “ಕೈಗಾರಿಕೆಗಳಲ್ಲಿ ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಸಿ.ಎನ್.ಸಿ. ಆಪರೇಟರಗಳ ಅವಶ್ಯಕತೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಹೊರತಾಗಿ ಸಿ.ಎನ್.ಸಿ.ಯೇ ಮೊದಲಾದ ಸಹ ಪಠ್ಯ ವಿಷಯಗಳಲ್ಲೂ ತಮ್ಮ ಜ್ಞಾನವನ್ನು ವಿಸ್ತರಿಸಬೇಕು. ಈ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೋಸ್ಕರ ವಸತಿ ವ್ಯವಸ್ಥೆಯ ಜೊತೆಗೆ ಕನಿಷ್ಠ ಶುಲ್ಕದೊಂದಿಗೆ ಇಂತಹ ತರಬೇತಿಯನ್ನು ನೀಡಲಾಗುತ್ತದೆ” ಎಂದು ತಿಳಿಸಿದರು.

ಸಿವಿಲ್ ಮತ್ತು ಮೆಕ್ಯಾನಿಕಲ್ ಶೈಕ್ಷಣಿಕ ವಿಭಾಗಗಳ ಡೀನ್ ಪ್ರೊ. ದುರ್ಗಾಪ್ರಸಾದ್ ಬಾಳಿಗಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರೊ. ಹೇಮಂತ್ ಸುವರ್ಣ ವಂದನಾರ್ಪಣೆಯನ್ನು ನೆರವೇರಿಸಿದರು.


Spread the love