ಆಳ್ವಾಸ್ ಪದವಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್‍ಗೆ ಆರು ರ್ಯಾಂಕ್

Spread the love

ಆಳ್ವಾಸ್ ಪದವಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್‍ಗೆ ಆರು ರ್ಯಾಂಕ್

ಮೂಡುಬಿದಿರೆ: ರಾಜೀವ್‍ಗಾಂಧಿ ವಿಶ್ವವಿದ್ಯಾಲಯವು 2019ರ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್‍ನ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, ಆಳ್ವಾಸ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಪದವಿ ಕಾಲೇಜು, ಶೇಕಡಾ 100 ಫಲಿತಾಂಶದೊಂದಿಗೆ, 6 ರ್ಯಾಂಕ್‍ಗಳನ್ನು ಪಡೆದುಕೊಂಡಿದೆ.

ಶೃತಿಗೆ ಎರಡನೇ ರ್ಯಾಂಕ್, ಎನ್. ಪ್ರಜ್ವಲ್‍ಗೆ ತೃತೀಯ ರ್ಯಾಂಕ್, ಅಕ್ಷತಾಗೆ ಐದನೇ ರ್ಯಾಂಕ್, ಶ್ರೀನಿಶಾಗೆ ಆರನೇ ರ್ಯಾಂಕ್, ಸುರಕ್ಷಾಗೆ ಏಳನೇ ರ್ಯಾಂಕ್, ರಝೀನಾಗೆ ಎಂಟನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಡಾ ವಿನಯ್ ಆಳ್ವ, ಪ್ರಾಂಶುಪಾಲ ಆದರ್ಶ್ ಹೆಗ್ಡೆ ಅಭಿನಂದಿಸಿದ್ದಾರೆ.


Spread the love