ಆಳ್ವಾಸ್ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಕಂಪ್ಯೂಟರ್ ತರಬೇತಿ

Spread the love

ಆಳ್ವಾಸ್ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಕಂಪ್ಯೂಟರ್ ತರಬೇತಿ

 

ಮೂಡುಬಿದಿರೆ: ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಂಪ್ಯೂಟರ್ ಜ್ಞಾನ ಬಹಳ ಅಗತ್ಯವಾದುದು. ಮೂಲಭೂತ ಕಂಪ್ಯೂಟರ್ ತಿಳಿವಳಿಕೆ ಪ್ರತಿಯೊಂದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದೊಂದಿಗೆ ತಿಳಿದುಕೊಳ್ಳುವುದು ಎಲ್ಲರಿಗೂ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಆಳ್ವಾಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳು ಮೂಡುಬಿದಿರೆ ಗಾಂಧಿನಗರದ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಮತ್ತು ಅಂತರ್ಜಾಲ ಬಳಕೆಯ ಮಾಹಿತಿಯನ್ನು ತಮ್ಮ ವಿಸ್ತರಣಾ ಚಟುವಟಿಕೆಯ ಮೂಲಕ ತಿಳಿಸಿದರು. ಕಂಪ್ಯೂಟರ್ ಡೆಸ್ಕಟಾಪ್, ಡ್ರೈವ್, ಪೊಲ್ಡರ್ ಹಾಗೂ ಪೈಲ್‍ಗಳ ನಿರ್ಮಾಣ, ಕಂಪ್ಯೂಟರ್ ಹಾರ್ಡವೇರ್, ಮೈಕ್ರೋಸಾಫ್ಟ್ ವಲ್ರ್ಡ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಮುಖ್ಯಸ್ಥೆ ವನಿತಾ ಪ್ರಭು, ಉಪನ್ಯಾಸಕ ಸಾಗರ್ ರೈ ಮತ್ತು ವಿದ್ಯಾರ್ಥಿಗಳಾದ ಕಾವ್ಯ, ಹೆಸಿಟ, ಭಾಗ್ಯಶ್ರೀ, ಅಶ್ವಿತ, ಶ್ರೀವತ್ಸ,ರಕ್ಷಿತ್, ಪ್ರಿಂಸಿಯ, ನಿತಿನ್, ಅಕ್ಷತ ಹಾಗೂ ಸಾಕ್ಷಿ ಇವರು ಭಾಗವಹಿಸಿದ್ದರು.


Spread the love