ಆಶಾ ಕಾರ್ಯಕರ್ತೆಯರಿಗೆ ರೂ 3000 ಗಳ ಪ್ರೋತ್ಸಾಹ ಧನ ಸ್ವಾಗತಾರ್ಹ, ಜೊತೆಯಲ್ಲಿ ವೇತನ ಕೂಡ ಹೆಚ್ಚಿಸಿ – ಪ್ರಖ್ಯಾತ್ ಶೆಟ್ಟಿ

Spread the love

ಆಶಾ ಕಾರ್ಯಕರ್ತೆಯರಿಗೆ ರೂ 3000 ಗಳ ಪ್ರೋತ್ಸಾಹ ಧನ ಸ್ವಾಗತಾರ್ಹ, ಜೊತೆಯಲ್ಲಿ ವೇತನ ಕೂಡ ಹೆಚ್ಚಿಸಿ – ಪ್ರಖ್ಯಾತ್ ಶೆಟ್ಟಿ

ಉಡುಪಿ: ರಾಜ್ಯ ಸರಕಾರ ಆಶಾ ಕಾರ್ಯಕರ್ತೆಯರಿಗೆ ರೂ 3000 ಗಳ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ ವಿಚಾರವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಹೇಳಿದ್ದಾರೆ.

ತಮ್ಮ ವೈಯಕ್ತಿಕ ಕುಟುಂಬದ ಬದುಕನ್ನೇ ಬದಿಗಿಟ್ಟು ಕೊರೊನಾ ನಿಗ್ರಹಕ್ಕೆ ಹಗಲಿರುಳು ಆಶಾ ಕಾರ್ಯಕರ್ತೆಯರು ಗ್ರಾಮೀಣ ಹಾಗೂ ನಗರಗಳ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶಕ್ಕೆ ಬಂದೊದಗಿರುವ ಅಘಾತಕಾರಿ ಸ್ಥಿತಿಯಲ್ಲಿ ಕೆಲವೊಂದು ವ್ಯಕ್ತಿಗಳು ಆಶಾ ಕಾರ್ಯಕರ್ತೆಯರ ಮೇಲೆ ನಿರಂತರ ಹಲ್ಲೆ, ದಬ್ಟಾಳಿಕೆ ನಡೆಸುತ್ತಿರುವುದು ಕೂಡ ಅಲ್ಲಲ್ಲಿ ವರದಿಯಾಗುತ್ತದೆ. ಇಷ್ಟೊಂದು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಲಭಿಸುವ ಸಂಬಳ ಅತೀ ಕಡಿಮೆಯಾಗಿದ್ದು ಅದನ್ನು ಕೂಡ ಏರಿಸಬೇಕು ಈ ಮೂಲಕ ಅವರಿಗೆ ಜೀವನ ಭದ್ರತೆ ಒದಗಿಸವು ಕೆಲಸ ಸರಕಾರದಿಂದ ಕೂಡಲೇ ನಡೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love