ಇಂಡಿಯನ್ ಸೋಷಿಯಲ್ ಫೋರಂ, ರಿಯಾದ್ ವತಿಯಿಂದ ಅದ್ದೂರಿ 72ನೇ ಸ್ವಾತಂತ್ರ್ಯ ಸಂಭ್ರಮ

Spread the love

ಇಂಡಿಯನ್ ಸೋಷಿಯಲ್ ಫೋರಂ, ರಿಯಾದ್ ವತಿಯಿಂದ ಅದ್ದೂರಿ 72ನೇ ಸ್ವಾತಂತ್ರ್ಯ ಸಂಭ್ರಮ

ರಿಯಾದ್: ತಾಯ್ನಾಡಿನಿಂದ ಸಾವಿರಾರು ಮೈಲಿ ದೂರ ಇದ್ದರೂ ದೇಶಪ್ರೇಮ ಕಿಂಚಿತ್ತೂ ಕಡಿಮೆಯಾಗಲ್ಲ ಎಂಬಂತೆ ಇಂಡಿಯನ್ ಸೋಷಿಯಲ್ ಫೋರಂ ರಿಯಾದ್, ಕೇಂದ್ರ ಸಮಿತಿ ವತಿಯಿಂದ ಆಗಸ್ಟ್ 15ರಂದು ರಿಯಾದಿನ ಅಲ್ ಮಾಸ್ ಹೋಟೆಲ್ ಸಭಾಂಗಣದಲ್ಲಿ 72ನೇ ಸ್ವಾತಂತೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು.

ಐಕ್ಯಗಾನದೊಂದಿಗೆ ಸಭಾ ಕಾರ್ಯಕ್ರಮವು ಸಾಂಕೇತಿಕವಾಗಿ ಚಾಲನೆಗೊಂಡಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತೀಯ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿಯಾದ ಟಿ ಟಿ ಜಾರ್ಜ್ ರವರು ಆಗಮಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಬಹಳಷ್ಟು ನಾಗರಿಕತೆಗಳು ಬಂದು ಹೋಗಿವೆ ಆದರೆ ಭಾರತೀಯ ನಾಗರಿಕತೆ ದಿನದಿಂದ ದಿನಕ್ಕೆ ಅಭಿವೃದ್ಧಿಗೊಳ್ಳುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಇಂಡಿಯನ್ ಸೋಷಿಯಲ್ ಫೋರಂ ಕೇಂದ್ರ ಸಮಿತಿ ಅಧ್ಯಕ್ಷ ಜನಾಬ್ ಹ್ಯಾರಿಸ್ ಅಂಗರಗುಂಡಿ ಮಂಗಳೂರು ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಭಿಕರನ್ನು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ನೀಡಿ, ಸೌದಿ ಅರೇಬಿಯಾದ ಭಾರತೀಯ ಸಮುದಾಯಕ್ಕಾಗಿ ಒಳ್ಳೆಯ ಕೆಲಸವನ್ನು ಮುಂದುವರಿಸಬೇಕೆಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಗಾರರಾಗಿ ಆಗಮಿಸಿದ ಇಂಡಿಯನ್ ಸೋಷಿಯಲ್ ಫೋರಂ ಉತ್ತರ ರಾಜ್ಯಗಳ ಸಂಚಾಲಕ ಜನಾಬ್ ಅಫ್ಸರ್ ಉಲ್ ಹಕ್ ಮಾತನಾಡಿ, ಸ್ವಾತಂತ್ರ್ಯ ದಿನದ ಸಂದೇಶವನ್ನು ನೀಡಿದರು. ‘ವೈವಿಧ್ಯತೆಯ ಏಕತೆ’ ಎಂಬ ಪರಿಕಲ್ಪನೆಯ ಆಧಾರದ ಮೇಲೆ ಭಾರತ ರಚನೆಯಾಯಿತು ಮತ್ತು ಅದು ಸುರಕ್ಷಿತವಾಗಿ ಕಾಪಾಡೋದು ಪ್ರತಿ ಭಾರತೀಯರ ಜವಾಬ್ದಾರಿಯಾಗಿದೆ, ರಾಷ್ಟ್ರದಲ್ಲೇ ಬೆಳೆಯುತ್ತಿರುವ ಅಭದ್ರತೆ ಮತ್ತು ಏಕತೆಯ ಕೊರತೆಯ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದವರಿಗೆ ರಾಷ್ಟ್ರೀಯತಾವಾದದ ಪಾಠವನ್ನು ಬೋಧಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಭಾಷಣ, ಆಲೋಚನೆಯನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನು ಪ್ರಗತಿಪರ ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಕೊಲ್ಲುವ ಮೂಲಕ ಕ್ರಮಬದ್ಧವಾಗಿ ಕಚ್ಚಾಟ ಮಾಡಲಾಗುತ್ತಿದೆ, ಆಡಳಿತ ಸರ್ಕಾರಕ್ಕೆ ವಿರುದ್ಧವಾಗಿ ಮಾತನಾಡುವ ಯಾರಾದರೂ. ನಮ್ಮ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿರುವ ರಾಷ್ಟ್ರ-ವಿರೋಧಿ ಎಂದು ಕರೆಯಲ್ಪಡುತ್ತಿದೆ.ಹಸುವಿನ ಮತ್ತು ಮಕ್ಕಳ ಕಳ್ಳಸಾಗಣೆ ಹೆಸರಿನಲ್ಲಿ ನಡೆಯುತ್ತಿರುವ ಸಾಮೂಹಿಕ ಹತ್ಯೆಗಳು ವಿದೇಶಗಳ ಮುಂದೆ ಇಡೀ ಭಾರತವನ್ನು ಮುಜುಗರಕ್ಕೀಡು ಮಾಡುತ್ತಿದೆ. ಪ್ರಸ್ತುತ ಸರ್ಕಾರಕ್ಕೆ ಮುಂಬರುವ ಚುನಾವಣೆಗಳಲ್ಲಿ ಪ್ರಸ್ತುತಪಡಿಸಲು ಭಾರತದಲ್ಲಿ ಯಾವುದೇ ಅಭಿವೃದ್ಧಿಯ ಕಾರ್ಯಗಳಿಲ್ಲ. ಆದ್ದರಿಂದ ಅವರು ಭಾರತವನ್ನು ಧಾರ್ಮಿಕ ರೇಖೆಗಳಲ್ಲಿ ವಿಭಜಿಸಿ ಮತಗಳನ್ನು ಪಡೆಯುವ ಷಡ್ಯಂತ್ರ ನಡೆಯುತ್ತಿದೆ ಅಂತಹ ಬಲೆಗಳನ್ನು ಬೀಳದಂತೆ ಜನರಿಗೆ ಮನವಿ ಮಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅಥಿಗಳಾಗಿ ಆಗಮಿಸಿದ ಅಲಿಗಢ್ ಮುಸ್ಲಿಂ ಯೂನಿವರ್ಸಿಟಿ ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಜನಾಬ್ ಇಂಜಿನಿಯರ್ ಸಲ್ಮಾನ್ ಖಾಲಿದ್ ,ಇಂಡಿಯಾ ಫ್ರೆಟರ್ನಿಟಿ ಫೋರಂ ಝೋನಲ್ ಸಮಿತಿ ಅಧ್ಯಕ್ಷರಾದ ಜನಾಬ್ ಬಷೀರ್ ಇಂಗಾಪುಝ , ಏರ್ ಇಂಡಿಯಾ ಏರ್ಪೋರ್ಟ್ ಮ್ಯಾನೇಜರ್ ಜನಾಬ್ ಮರಿಯಪ್ಪನ್, L&T ಕಂಪನಿಯ ಉಪಾಧ್ಯಕ್ಷರಾದ ಜನಾಬ್ ಶ್ರೀನಿವಾಸನ್, ಕಿದ್ಮ ಫೌಂಡೇಶನ್ ಕುಂದಾಪುರ ಇದರ ಉಪಾಧ್ಯಕ್ಷರಾದ ಜನಾಬ್ ಮೊಹಮ್ಮದ್ ಹನೀಫ್ ಶೈಖ್, ಅಜ್ಮಲ್ PV ಅಧ್ಯಕ್ಷರು MES, ಅರಬ್ ನ್ಯೂಸ್ ಇದರ ಪ್ರಮುಖರಾದ ಜನಾಬ್ ಕೆ ಎನ್ ವಾಸಿಫ್ , ಮೀಡಿಯಾ ಫೋರಮ್ ಇದರ ಅಧ್ಯಕ್ಷರಾದ ಜನಾಬ್ ಉಬೈದ್ ಇಡವನ್ನ ಇವರು ಎಲ್ಲಾ ಅನಿವಾಸಿ ಭಾರತೀಯರಿಗೆ ಸ್ವಾತಂತ್ರ್ಯ ದಿನದಶುಭಹಾರೈಸಿ ಸಂದೇಶವನ್ನು ನೀಡಿದರು. ವಿವಿಧ ರಾಜ್ಯಗಳ ಮುಖಂಡರನ್ನು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿಸಿದ ಇಂಡಿಯನ್ ಸೋಷಿಯಲ್ ಫೋರಂ ಪ್ರಯತ್ನಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರವಾಹಕ್ಕೀಡಾದ ಕೇರಳ ಮತ್ತು ಕರ್ನಾಟಕದ ಜನರಿಗೆ ವಿಶೇಷ ಪ್ರಾರ್ಥನೆಗಾಗಿ ಕೋರಲಾಯಿತು. ರಾಷ್ಟ್ರಗೀತೆಯನ್ನು ಹಾಡೋದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

ಕಾರ್ಯಕ್ರಮಕ್ಕೆ ಸೋಷಿಯಲ್ ಫೋರಂ ಕೇಂದ್ರ ಸಮಿತಿ ಪ್ರದಾನ ಕಾರ್ಯದರ್ಶಿ ಬಷೀರ್ ಕಾರಂದೂರ್ ಕೇರಳ ಸ್ವಾಗತಿಸಿ, ಕೇಂದ್ರ ಸಮಿತಿ ಸದಸ್ಯರಾದ ರಶೀದ್ ಕಾಸಿಮಿ ಕೇರಳ ವಂದಿಸಿದರು. ಕಾರ್ಯಕ್ರಮವನ್ನು ಅಬ್ದುಲ್ ಬಷೀರ್ ಕೇರಳ ನಿರೂಪಿಸಿದರು.


Spread the love