ಇನ್ ಸ್ಟಾಗ್ರಾಂ ನಲ್ಲಿ ಕೋಮುದ್ವೇಷದ ಸಂದೇಶ: ಪ್ರಕರಣ ದಾಖಲು

Spread the love

ಇನ್ ಸ್ಟಾಗ್ರಾಂ ನಲ್ಲಿ ಕೋಮುದ್ವೇಷದ ಸಂದೇಶ: ಪ್ರಕರಣ ದಾಖಲು

ಪುತ್ತೂರು: Instagram ನಲ್ಲಿ ಕೋಮು ವೈಮನಸ್ಸು ಉಂಟು ಮಾಡುವ ಹಾಗೂ ಸುಳ್ಳು ಮಾಹಿತಿಯನ್ನು ಹೊಂದಿರುವ ಸಂದೇಶವನ್ನು ಪ್ರಸಾರ ಮಾಡಿರುವ ಆರೋಪದಲ್ಲಿ ಶುಕ್ರವಾರ Instagram ಖಾತೆ ಬಳಕೆದಾರ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಪುತ್ತೂರು ಸಂತ ಫಿಲೋಮಿನಾ ಕಾಲೇಜ್ ನ ಉಪನ್ಯಾಸಕ ಜಾನ್ಸನ್ ಡೇವಿಡ್‌ ಸಿಕ್ವೇರ ಎಂಬವರು ನೀಡಿರುವ ದೂರಿನಂತೆ @tm_bad_karma_990 ಎಂಬ Instagram ಖಾತೆಯ ಬಳಕೆದಾರ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.

ದೂರುದಾರ ಜೋನ್ಸನ್ ಡೇವಿಡ್ ಸೀಕ್ವೆರ ಅವರು ಪುತ್ತೂರಿನ  ಕಾಲೇಜಿನಲ್ಲಿ ಉಪನ್ಯಾಸಕ ರಾಗಿದ್ದು, ಶುಕ್ರವಾರ ತನ್ನ ಮೊಬೈಲ್ ನಲ್ಲಿ Instagram ಖಾತೆಯನ್ನು ಪರಿಶೀಲಿಸುತ್ತಿರುವಾಗ, @tm_bad_karma_990 ಎಂಬ Instagram ಖಾತೆಯನ್ನು ಬಳಸುತ್ತಿರುವ ವ್ಯಕ್ತಿಯು, ತಾನು ಉಪನ್ಯಾಸಕರಾಗಿರುವ ಕಾಲೇಜಿನಲ್ಲಿ ದಿನಾಂಕ 19-08-2025 ರಂದು ನಡೆದ ನೃತ್ಯ ಕಾರ್ಯಕ್ರಮದಲ್ಲಿ, ಒಂದು ನಿರ್ಧಿಷ್ಟ ಸಮುದಾಯದ ವಿದ್ಯಾರ್ಥಿನಿಯರು ಭಾಗವಹಿಸಿರುವುದರ ಬಗ್ಗೆ ಅಕ್ಷೇಪ ವ್ಯಕ್ತಪಡಿಸುತ್ತಾ, ಧರ್ಮದ ಆಧಾರದಲ್ಲಿ ವಿವಿಧ ಧರ್ಮಗಳ ನಡುವೆ ವೈಮನಸ್ಸನ್ನು ಉಂಟಾಗುವಂತಹ ಹಾಗೂ ಸುಳ್ಳು ಮಾಹಿತಿ ಹೊಂದಿರುವ ಸಂದೇಶವನ್ನು ಹಾಕಿರುವುದಲ್ಲದೇ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ:77/2025, ಕಲಂ: 196(1)(a)(b) 351(2),352 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


Spread the love
Subscribe
Notify of

0 Comments
Inline Feedbacks
View all comments