ಇಲ್ಯಾಸ್ ಮನೆಯವರ ದುಃಖದಲ್ಲಿ ನಾವೂ ಇದ್ದೇವೆ ; ಸಚಿವ ಯು.ಟಿ.ಖಾದರ್

Spread the love

ಇಲ್ಯಾಸ್ ಮನೆಯವರ ದುಃಖದಲ್ಲಿ ನಾವೂ ಇದ್ದೇವೆ ; ಸಚಿವ ಯು.ಟಿ.ಖಾದರ್

ಮಂಗಳೂರು: ಇತ್ತೀಚೆಗೆ ಹತ್ಯೆಗೀಡಾದ ಇಲ್ಯಾಸ್ ಮನೆಯವರ ದುಃಖದಲ್ಲಿ ನಾವೂ ಇದ್ದೇವೆ. ಇಲ್ಯಾಸ್ ಪತ್ನಿ ನನ್ನ ಸಹೋದರಿಯ ಸ್ಥಾನದಲ್ಲಿದ್ದು, ಅವರ ದುಃಖ ನನಗೆ ಅರ್ಥವಾಗುತ್ತದೆ. ನೈಜ ಆರೋಪಿಗಳ ಬಂಧನವಾದಾಗ ಅವರಿಗೂ ಸಮಾಧಾನ ತರಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೊರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮನೆಗೆ ಬರುತ್ತಿದ್ದ ಸಚಿವ ಖಾದರ್ ಅವರು ಈಗ ಎಲ್ಲಿದ್ದಾರೆ ಎಂದು ಇಲ್ಯಾಸ್ ಪತ್ನಿ ನೀಡಿರುವ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಇಲ್ಯಾಸ್ ಪತ್ನಿ ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ, ಮಾತ್ರವಲ್ಲದೆ ಅವರ ದುಃಖದ ಸಂದರ್ಭದಲ್ಲಿ ಆ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಾನು ಯಾರ ಬಳಿ ಹೋಗಬೇಕು, ಯಾರ ಸಹಕಾರ ಪಡೆಯುತ್ತೇನೆ, ಪಡೆದಿದ್ದೇನೆ ಎನ್ನುವುದು ನನ್ನ ಕ್ಷೇತ್ರದ ಸರ್ವರಿಗೂ ತಿಳಿದಿದೆ. . ಇಲ್ಯಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನೈಜ ಆರೋಪಿಗಳನ್ನು ಬಂಧಿಸುವಂತೆ ಈಗಾಗಲೇ ಪೋಲಿಸ್ ಇಲಾಖೆ ಜೊತೆಗೂ ಚರ್ಚೆ ನಡೆಸಲಾಗಿದೆ ಎಂದರು.

ಇಲ್ಯಾಸ್ ಪತ್ನಿ ಬತ್ಗೆ ನನಗೆ ಅನುಕಂಪವಿದ್ದು ಈ ಪ್ರಕರಣದಲ್ಲಿ ರಾಜಕೀಯ ತರುವುದು ತನಗೆ ಇಷ್ಟವಿಲ್ಲ. ದೀಪಕ್ ರಾವ್ ಹತ್ಯೆಯ ಸಂದರ್ಭ ಜೈಲಿನಲ್ಲಿದ್ದ ಇಲ್ಯಾಸ್ ನನ್ನ ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ಅದಾಗಲೇ ಪೋಲಿಸರು ಬಂಧಿಸಿದ್ದ ನೈಜ ಆರೋಪಿಗಳನ್ನು ಮರೆಮಾಚಲಾಯಿತು ಎಂದರು.


Spread the love