ಉಗ್ರವಾದವನ್ನು ಪೋಷಿಸುವ ಡಾ. ಝಾಕಿರ ನಾಯಿಕ್‌ನನ್ನು ಬಂಧಿಸಿ; ಹಿಂಜಾಸಂ

ಉಗ್ರವಾದವನ್ನು ಪೋಷಿಸುವ ಡಾ. ಝಾಕಿರ ನಾಯಿಕ್‌ನನ್ನು ಬಂಧಿಸಿ; ಹಿಂಜಾಸಂ

ಮಂಗಳೂರು: ಹಿಂದೂ ದೇವತೆ ಸಹಿತ ಇತರ ಪಂಥದ ಶ್ರದ್ಧಾಸ್ಥಾನಗಳು, ಹಾಗೆಯೇ ಮಹಮ್ಮದ ಪೈಗಂಬರರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಕ್ಕಾಗಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಸಂಸ್ಥಾಪಕ ಡಾ. ಝಾಕಿರ್ ನಾಯಿಕ್ ಮೇಲೆ ಭಾರತದಲ್ಲಿ ಅಪರಾಧಗಳು ದಾಖಲಾಗಿವೆ. ಉಗ್ರವಾದಿ ಚಟುವಟಿಕೆ ಹಾಗೂ ಒಸಾಮಾ ಬಿನ್ ಲಾಡೆನ್‌ನನ್ನು ಬೆಂಬಲಿಸಿದ್ದಕ್ಕಾಗಿ ಇಂಗ್ಲೆಂಡ್, ಮಲೇಷ್ಯಾ ಮತ್ತು ಕೆನಡಾ ದೇಶಗಳಲ್ಲಿ ಡಾ. ಝಾಕಿರ್ ನಾಯಿಕ್ ಮೇಲೆ ಪ್ರವೇಶ ನಿಷೇಧ ಹೇರಲಾಗಿದೆ. ಅದರಲ್ಲೂ ಬಾಂಗ್ಲಾದೇಶದ ಢಾಕಾದಲ್ಲಿ ಅಮಾಯಕರ ಹತ್ಯೆಗೈದ ಉಗ್ರರಿಗೆ ಡಾ. ನಾಯಿಕ್‌ನಿಂದ ಪ್ರೋತ್ಸಾಹ ದೊರೆತಿರುವುದು ಸಹ ಬೆಳಕಿಗೆ ಬಂದಿದೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು ಡಾ. ಝಾಕಿರ್ ನಾಯಿಕ್ ಇವರ ವಿವಾದಾಸ್ಪದ ಹಿನ್ನೆಲೆಯನ್ನು ಗಮನದಲ್ಲಿಟ್ಟು ಅವರನ್ನು ತಕ್ಷಣ ಬಂಧಿಸಬೇಕು ಹಾಗೂ ಅವರಿಗೆ ದೊರೆಯುವ ಆರ್ಥಿಕ ಮೂಲದ ಬಗ್ಗೆ ಆಮೂಲಾಗ್ರ ತನಿಖೆ ನಡೆಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಬೇಡಿಕೆಯನ್ನಿಟ್ಟಿದೆ.

ಝಾಕಿರ್ ನಾಯಿಕ್ ಬಹಿರಂಗ ಸಭೆ, ದೂರದರ್ಶನ ಮತ್ತು ಇತರ ಇಂಟರ್‌ನೆಟ್ ಮಾಧ್ಯಮಗಳಿಂದ ಹಿಂದೂ ಧರ್ಮ, ದೇವತೆ, ಧರ್ಮಗ್ರಂಥ ಇವುಗಳ ವಿಡಂಬನೆ ಮಾಡುತ್ತಿದ್ದಾನೆ. ಭಾರತದಲ್ಲಿ ಡಾ. ಝಾಕಿರ್ ನಾಯಿಕ್‌ನ ‘ಪೀಸ್ ಟಿವಿ’ ಈ ವಾಹಿನಿಯು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವ ವಿಷಯವನ್ನು ಬಿತ್ತರಿಸಿದ್ದರಿಂದ ಅಂದಿನ ಕಾಂಗ್ರೆಸ್ ಸರಕಾರ ನಿಷೇಧ ಹೇರಿತ್ತು; ಹೀಗಿದ್ದರೂ ಭಾರತದ ಅನೇಕ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ‘ಪೀಸ್ ಟಿವಿ’ಯನ್ನು ರಾಜಾರೋಷವಾಗಿ ಬಿತ್ತರಿಸುತ್ತಿರುವುದು ಕಂಡು ಬರುತ್ತಿದೆ. ಮಹಾರಾಷ್ಟ್ರದ ಸೋಲಾಪುರದಲ್ಲಿಯೂ ಅನಧಿಕೃತವಾಗಿ ಪ್ರಕ್ಷೇಪಣೆ ನಡೆಯುತ್ತಿತ್ತು. ಅದರ ವಿರುದ್ಧ ಸಮಿತಿಯು ದೂರು ನೀಡಿದೆ. ಪೀಸ್ ಟಿವಿಯನ್ನು ಅನಧಿಕೃತವಾಗಿ ತೋರಿಸುವ ಕೇಬಲ್ ಚಾಲಕರ ಮೇಲೆ ರಾಜ್ಯ ಸರಕಾರವು ತಕ್ಷಣ ಕ್ರಮಕೈಗೊಳ್ಳಬೇಕು.

ಢಾಕಾದಲ್ಲಿ ಉಗ್ರವಾದಿ ಕೃತ್ಯ ಮಾಡುವ ಮುಸಲ್ಮಾನ ಯುವಕರಿಗೆ ಡಾ. ಝಾಕಿರ್ ನಾಯಿಕ್ ಈತನ ಪ್ರೋತ್ಸಾಹವಿರುವುದು ಬೆಳಕಿಗೆ ಬಂದಿರುವುದರಿಂದ ಭಾರತಕ್ಕಾಗಿ ಇದು ಅತ್ಯಂತ ಅಪಾಯಕಾರಿಯಾಗಿದೆ. ಈ ಮೊದಲೇ ಭಾರತದ ಅನೇಕ ಮುಸಲ್ಮಾನ ಯುವಕರು ಹಾಗೂ ಯುವತಿಯರು ಐಎಸ್ (ಇಸ್ಲಾಮಿಕ್ ಸ್ಟೇಟ್) ಈ ಉಗ್ರ ಸಂಘಟನೆಯಲ್ಲಿ ಸೇರಲು ಹೋಗುತ್ತಿದ್ದಾರೆ. ಬಹುಶಃ ಅವರಿಗೆ ಪ್ರೋತ್ಸಾಹ ನೀಡುವುದರ ಹಿಂದೆಯೂ ಡಾ. ಝಾಕಿರ್ ನಾಯಿಕ್ ಇರುವ ಸಾಧ್ಯತೆಯಿದೆ. ಹಾಗಾಗಿ ಡಾ. ಝಾಕಿರ್ ನಾಯಿಕ್ ಮತ್ತು ಅವರ ಸಂಸ್ಥೆಯ ಬೇರುಗಳನ್ನು ಕಿತ್ತೆಸೆದು ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು.