ಉಡುಪಿಯಲ್ಲಿ ಉಚಿತ ಬಸ್ ಸೇವೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕಂಡೆಕ್ಟರ್!

Spread the love

ಉಡುಪಿಯಲ್ಲಿ ಉಚಿತ ಬಸ್ ಸೇವೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕಂಡೆಕ್ಟರ್!

ಉಡುಪಿ: ಕ್ಯಾಬಿನೆಟ್ ದರ್ಜೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಬಸ್ಸಿನಲ್ಲಿ ಕಂಡೆಕ್ಟರ್ ಕೆಲಸ ಮಾಡುತ್ತಿದ್ದಾರೆ ಎಂದರೆ ನಂಬುವ ಮಾತೆ? ಆದರೆ ಉಡುಪಿಯಲ್ಲಿ ಇಂತಹ ಅಪರೂಪದ ಜಿಲ್ಲಾ ಪಂಚಾಯತ್ ಅಧ್ಯಕ್ಷರಿದ್ದಾರೆ ಅವರೇ ದಿನಕರ ಬಾಬು.

ಲಾಕ್ ಡೌನ್ ಹಿನ್ನಲೆಯಿಂದ ಬಸ್ಸುಗಳಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಜನರಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳ ಇವರ ಸಹಕಾರದೊಂದಿಗೆ ಉಡುಪಿಯ ಶಾಸಕ ರಘುಪತಿ ಭಟ್ ಅವರು ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಿದ್ದು ಇದಕ್ಕೆ ಬಿಜೆಪಿ ಕಾರ್ಯಕರ್ತರು ಹಾಗೂ ಗಣೇಶೋತ್ಸವ ಸಮಿತಿಯ ಕಾರ್ಯಕರ್ತರೆ ಸ್ವಯಂ ಸೇವಕರಾಗಿ ಬಸ್ಸಿನಲ್ಲಿ ಸೇವೆ ನೀಡುತ್ತಿದ್ದಾರೆ.

ಅದರಂತೆ ಉಡುಪಿ ನಗರದಲ್ಲಿ ಖಾಸಗಿ ಸಿಟಿ ಬಸ್ಸಿನಲ್ಲಿ ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರು ಸ್ವತಃ ಕಂಡೆಕ್ಟರ್ ಆಗಿ ತನ್ನ ಉಚಿತ ಸೇವೆಯನ್ನು ನೀಡುತ್ತಿದ್ದಾರೆ. ಬಸ್ಸಿಗೆ ಬರುವ ಪ್ರಯಾಣಿಕರಿಗೆ ಸ್ಯಾನಿಟೈಜ್ ಮಾಡುವುದು ಸೇರಿದಂತೆ ಅವರ ಮಾಹಿತಿಗಳನ್ನು ಸಂಗ್ರಹಿಸುವ ಕೆಲಸವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ನಿರ್ವಹಿಸುತ್ತಿದ್ದು ಸಾರ್ವಜನಿಕರು ಅಧ್ಯಕ್ಷರ ಸರಳ ಜೀವನಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿಯ ಏಳು ರೂಟ್ ಗಳಲ್ಲಿ 12 ಬಸ್ ಗಳು ಉಚಿತ ಸಂಚಾರ ಮಾಡುತ್ತಿವೆ.


Spread the love