ಉಡುಪಿಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ನಾಲ್ವರಿಗೆ ಪಾಸಿಟಿವ್ ದೃಢ

Spread the love

ಉಡುಪಿಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ನಾಲ್ವರಿಗೆ ಪಾಸಿಟಿವ್ ದೃಢ

ಉಡುಪಿ: ಮಹಾರಾಷ್ಟ್ರದಿಂದ ಕುಂದಾಪುರಕ್ಕೆ ಆಗಮಿಸಿ ಕ್ವಾರಂಟೈನ್ ಆಗಿದ್ದ ವೇಳೆ ಹೃದಯಾಘಾತವಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟ 54-ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿತ್ತು. ಈಗ ಮೃತಪಟ್ಟ ವ್ಯಕ್ತಿಯಿಂದ ಸಂಪರ್ಕಕಕ್ಕೆ ಬಂದ ಆತನ ಮಡದಿ ಮತ್ತು ಮೂವರು ಮಕ್ಕಳಿಗೂ ಕೋವಿಡ್ -19 ಪಾಸಿಟಿವ್ ದೃಢಪಟ್ಟಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಿಂದ ಬಂದ ಕುಂದಾಪುರ ಮೂಲದ ಪೇಶೆಂಟ್ ನಂಬರ್ 1093, 54 ವರ್ಷದ ವ್ಯಕ್ತಿ, 13ನೇ ಮೇ 2020ರ ಸಂಜೆ ಹೃದಯಾಘಾತವಾಗಿ (MI) ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿದ್ದು 14 ಮೇ 2020ರ ಸಂಜೆ ಮೃತಪಟ್ಟಿದ್ದರು. ಅವರಿಗೆ ಕೊರೊನಾ ಸೋಂಕು ಇರುವುದಾಗಿ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿತ್ತು. ಮೃತರಾದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಕೂಡ ನಡೆಸಲು ಕುಟುಂಬ ವರ್ಗ ಬಂದಿರಲಿಲ್ಲ. ಬಳಿಕ ಜಿಲ್ಲಾಡಳಿತವೇ ಬೀಡಿನಗುಡ್ಡೆ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿತ್ತು.

ಇವರ ಇಡೀ ಕುಟುಂಬ ಕ್ವಾರಂಟೈನ್ ನಲ್ಲಿ ಇತ್ತು. ಈಗ ಮೃತ ವ್ಯಕ್ತಿಯ 51 ವರ್ಷದ(ಪೇಶೆಂಟ್ ನಂಬರ್ 1515) ಮಡದಿ, 26 ವರ್ಷದ (ಪೇಶೆಂಟ್ ನಂಬರ್ 1532 ) ಮಗಳು ಮತ್ತು 24(ಪೇಶೆಂಟ್ ನಂಬರ್ 1533) ಮತ್ತು 21 (ಪೇಶೆಂಟ್ ನಂಬರ್ 1534) ವರ್ಷದ ಇಬ್ಬರು ಮಗಂದಿರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲರಿಗೂ ಉಡುಪಿ ಜಿಲ್ಲೆಯ ಟಿ ಎಮ್ ಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Spread the love