ಉಡುಪಿಯಲ್ಲಿ ಕೋವಿಡ್ ಗೆದ್ದ 18 ಮಕ್ಕಳ ಸಹಿತ 45 ಮಂದಿ ಆಸ್ಪತ್ರೆಯಿಂದ ಬಿಡುಗಡೆ

Spread the love

ಉಡುಪಿಯಲ್ಲಿ ಕೋವಿಡ್ ಗೆದ್ದ 18 ಮಕ್ಕಳ ಸಹಿತ 45 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕರೋನ ಮುಕ್ತರಾಗಿ ಮನೆಗೆ ಹೊರಟ 45 ಮಂದಿಗೆ ಜಿಲ್ಲಾಡಳಿತ ಪ್ರೀತಿಪೂರ್ವಕ ವಿದಾಯವನ್ನು ಕೋರಿತು.

ಕೋವಿಡ್ ನಿಂದ ಗುಣಮುಖರಾದ 18 ಮಂದಿ ಮಕ್ಕಳ ಸಹಿತ ಒಟ್ಟು 45 ಮಂದಿಯನ್ನು ಜಿಲ್ಲಾಧಿಕಾರಿ ಜಿ ಜಗದೀಶ್ ಸ್ವತಃ ಉಡುಪಿಯ ಟಿ ಎಂ ಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಹಾಜರಿದ್ದು ಗುಣಮುಖರಾಗಿ ಮನೆ ದಾರಿ ಹಿಡಿದ ಮಕ್ಕಳಿಗೆ ಚಾಕಲೇಟ್ ಕೊಟ್ಟು ಬಿಳ್ಕೋಟ್ಟರು.

 

ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಕೆ ಎಮ್ ಸಿ ಆಸ್ಪತ್ರೆಯ ಡಾ| ಅವಿನಾಶ್ ಶೆಟ್ಟಿ, ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.


Spread the love