ಉಡುಪಿಯಲ್ಲಿ ಪೊಲೀಸರ ಬೆನ್ನುಬಿದ್ದ ಕರೋನಾ ಮಹಾಮಾರಿ; 5 ಸಿಬಂದಿಗಳಿಗೆ ಪಾಸಿಟಿವ್

Spread the love

ಉಡುಪಿಯಲ್ಲಿ ಪೊಲೀಸರ ಬೆನ್ನುಬಿದ್ದ ಕರೋನಾ ಮಹಾಮಾರಿ; 5 ಸಿಬಂದಿಗಳಿಗೆ ಪಾಸಿಟಿವ್

ಉಡುಪಿ: ಉಡುಪಿ ಜಿಲ್ಲೆಯ ಪೊಲೀಸರಲ್ಲಿ ಮತ್ತೆ ಕೊರೋನಾ ಭಯ ಮುಂದುವರೆದಿದ್ದು, ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಒಟ್ಟು 5 ಮಂದಿ ಪೊಲೀಸ್ ಸಿಬಂದಿಗಳಿಗೆ ಪಾಸಿಟವ್ ದೃಢಗೊಂಡಿದೆ.

ಶಂಕರನಾರಾಯಣ ಪೊಲೀಸ್ ಠಾಣೆಯ ಒರ್ವ ಮಹಿಳಾ ಸಿಬಂದಿ ಹಾಗೂ ಡಿ ಎ ಆರ್ ನ 4 ಪೊಲೀಸ್ ಸಿಬಂದಿಗಳಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಮಾಹಿತಿ ನೀಡಿದ್ದಾರೆ.

ಕೊರೋನಾ ಪಾಸಿಟಿವ್ ಬಂದಿರುವ ಶಂಕರನಾರಾಯಣ ಪೊಲೀಸ್ ಠಾಣೆಯನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದ್ದು ಬುಧವಾರದಿಂದ ಎಂದಿನಂತೆ ಕಾರ್ಯಾಚರಿಸಲಿದೆ ಅಲ್ಲದೆ ಡಿಎ ಆರ್ ಕೇಂದ್ರವನ್ನು ಸಹ ಸ್ಯಾನಿಟೈಜ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.


Spread the love