ಉಡುಪಿ: ಅಪರಿಚಿತ ಮೃತ ವ್ಯಕ್ತಿಯ ಪತ್ತೆಗೆ ಮನವಿ

Spread the love

ಉಡುಪಿ: ಉಡುಪಿ ಕುಂದಾಪುರ ರಾ.ಹೆ.66ರ ಕಲ್ಯಾಣಪುರ ಸಂತೆಕಟ್ಟೆಯ ಮಾಸ್ತಿಕಟ್ಟೆ ಬಳಿಕ ಮೇ 17ರಂದು ರಾತ್ರಿ 10.30ರ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ರಿಕ್ಷಾ ಢಿಕ್ಕಿ ಹೊಡೆದು ಗಾಯಗೊಂಡಿದ್ದ. ತಕ್ಷಣ ಉಡುಪಿ ಜಿ ಅಸ್ಪತ್ರೆಗೆ ದಾಖಲಿಸಲಾಗಿದ್ದವರು ಗಂಭೀರ ಗಾಯಗೊಂಡಿದ್ದ ಕಾರಣ ಮೇ 20ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಆತ ಸುಮಾರು 5.6 ಅಡಿ ಎತ್ತರವಿದ್ದು, ಕುರುಚಲು ಗಡ್ಡ, ಸಪೂರ ಮೀಸೆ ಹಾಗೂ ಸಣಕಲು ದೇಹವನ್ನು  ಹೊಂದಿರುವ ಸುಮಾರು 45-50 ವರ್ಷ ಪ್ರಾಯದ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಉಡುಪಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ವಾರಿಸುದಾರರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ರಕ್ತ ಸಂಬಂಧಿಕರು ಯಾರಾದರೂ ಇದ್ದಲ್ಲಿ ಕೂಡಲೇ ಪೆÇಲೀಸ್ ವೃತ್ತ ನಿರೀಕ್ಷಕರು ಮೊಬೈಲ್ ಸಂಖ್ಯೆ 9480805430 ಅಥವ ಉಡುಪಿ ಸಂಚಾರ ಪೆÇಲೀಸ್ ಠಾಣೆಯ ಸಂಖ್ಯೆ 0820-2521332 ಗೆ ಅಥವಾ ಉಡುಪಿ ಕಂಟ್ರೋಲ್ ರೂಂ ಸಂಖ್ಯೆ 0820-2526444ಗೆ ಮಾಹಿತಿ ನೀಡುವಂತೆ ಪೋಲೀಸ್ ಪ್ರಕಟಣೆ ತಿಳಿಸಿದೆ.


Spread the love