ಉಡುಪಿ: ಉಪ್ಪಾದಿಂದ ಪೇಜಾವರ ಪರ್ಯಾಯ ‘ವಿಶ್ವ’ವರ್ಣ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ

Spread the love

ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪೇಜಾವರ ಅದೋಕ್ಷಜ ಮಠ. ಉಡುಪಿ ಆಶ್ರಯದಲ್ಲಿ ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ಉಡುಪಿಯಲ್ಲಿ ಜನವರಿ 18ರಂದು ಪೇಜಾವರ ವಿಶ್ವೇಶ ತೀರ್ಥಶ್ರೀಪಾದರ ಐತಿಹಾಸಿಕ ಐದನೇ ಪರ್ಯಾಯದ ಅಂಗವಾಗಿ ‘ವಿಶ್ವ’ವರ್ಣ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ.

05PR PEJ 1

ಸ್ಪರ್ಧೆಯ ಬಹುಮಾನದ ವಿವರ : ಪ್ರಥಮ-ರೂ. 10,000=00, ದ್ವಿತೀಯ- ರೂ.  5,000=00, ತೃತೀಯ-   ರೂ.  3,000-00 ನಗದು ಹಾಗೂ 5 ಸಮಾಧಾನಕರ ಬಹುಮಾನ ಮತ್ತು ಆಕರ್ಷಕ ಸ್ಮರಣಿಕೆ ನೀಡಲಾಗುವುದು.

ಸ್ಪರ್ಧೆಯ ನಿಯಮಗಳು

  • ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.
  • ಒಬ್ಬರು 12*18 ಗಾತ್ರದ ಗರಿಷ್ಠ ನಾಲ್ಕು ಚಿತ್ರಗಳನ್ನು ಕಳಿಸಬಹುದು.
  • ಸ್ಪರ್ಧೆಗೆ ಕಳಿಸುವ ಚಿತ್ರಗಳು ಉಡುಪಿಯಲ್ಲಿ 2016ರ ಪೇಜಾವರ ಪರ್ಯಾಯ ಮಹೋತ್ಸವಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿರಬೇಕು.
  • ಜನವರಿ 4ರ ಪುರಪ್ರವೇಶದಿಂದ ಪ್ರಾರಂಭಗೊಂಡು ಜನವರಿ 25ರವರೆಗಿನ ಪರ್ಯಾಯ ಸಂಭ್ರಮದ ವರೆಗಿನ ಸಂತಸದ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಕಳಿಸಿಕೊಡ ಬಹುದು.
  • ಛಾಯಾ ಚಿತ್ರಗಳನ್ನು ಕಳಿಸಲು ಕೊನೆಯ ದಿನಾಂಕ 2016 ಫೆಬ್ರವರಿ,12 ರೊಳಗೆ ಜನಾರ್ದನ್ ಕೊಡವೂರು, ‘ಭಾಮಾ’. ಕೆನರಾ ಬ್ಯಾಂಕ್ ಬಳಿ, ಕೊಡವೂರು-576116
  • ಸಂಘಟಕರ ತೀರ್ಮಾನವೇ ಅಂತಿಮ.

ಸಂಪರ್ಕ: ಜನಾರ್ದನ್ ಕೊಡವೂರು- 9448252363, ಗಣೇಶ್ ಕಲ್ಯಾಣ್‍ಪುರ- 9449330877, ಆಸ್ಟ್ರೋ ಮೋಹನ್- 9845243306, ಹೇಮನಾಥ್ ಪಡಿಬಿದ್ರೆ- 9448429909, ಉಮೇಶ್ ಕುಕ್ಕುಪಲ್ಕೆ- 9448308541, ಶರತ್ ಕಾನಂಗಿ- 9845578720, ಅನಂತ್ ಭಾಗವತ್- 9886098249, ಪ್ರಸನ್ನ ಕೊಡವುರು- 9449293214


Spread the love