ಉಡುಪಿ : ಉಪ್ಪಾ ಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ

Spread the love

ಉಡುಪಿ: ಉಡುಪಿಯಲ್ಲಿ ಸೆ. 5 ಮತ್ತು 6ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬ ಅಂಗವಾಗಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ ಪರ್ಯಾಯ ಕಾಣಿಯೂರು ಶ್ರೀಕೃಷ್ಣಮಠ ಪ್ರಾಯೋಜಕತ್ವದಲ್ಲಿ `ಉಪ್ಪಾ ಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ’ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇಲ್ಲ.

ಒಬ್ಬರು ಗರಿಷ್ಠ 4 ಚಿತ್ರ ಕಳಿಸಬಹುದು. ಚಿತ್ರದ ಅಗಲ 1,800 ಪಿಕ್ಸೆಲ್‍ನಲ್ಲಿದ್ದು, ಗರಿಷ್ಠ  2 ಮೆಗಾ ಬೈಟ್ [MB] ಒಳಗಿರಬೇಕು. ಚಿತ್ರಗಳನ್ನು uppaudupi@gmail.com ಗೆ ಸೆ. 20ರೊಳಗೆ ಕಳಿಸಬೇಕು. ಆಯ್ಕೆಯಾದ ಚಿತ್ರಗಳಿಗೆ ಪ್ರಥಮ ರೂ. 5555, ದ್ವಿತೀಯ ರೂ. 3333, ತೃತೀಯ ರೂ. 2222 ನಗದು ಹಾಗೂ 5 ಸಮಾಧಾನಕರ ಬಹುಮಾನ ಮತ್ತು ಆಕರ್ಷಕ ಸ್ಮರಣಿಕೆ ನೀಡಲಾಗುವುದು.

ಸ್ಪರ್ಧೆಗೆ ಕಳಿಸುವ ಚಿತ್ರಗಳು ಉಡುಪಿಯಲ್ಲಿ ಈ ಬಾರಿ (2015) ನಡೆಯುವ ಜನ್ಮಾಷ್ಟಮಿ- ವಿಟ್ಲಪಿಂಡಿ ಮಹೋತ್ಸವಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿರಬೇಕು. ಸಂಘಟಕರ ತೀರ್ಮಾನವೇ ಅಂತಿಮ ಎಂದು ಉಪ್ಪಾ ಅಧ್ಯಕ್ಷ ಜನಾರ್ದನ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love