ಉಡುಪಿ ಎಸ್ ಪಿ ಲಕ್ಷ್ಮಣ ಬಿ.ನಿಂಬರ್ಗಿ ವರ್ಗಾವಣೆ

Spread the love

ಉಡುಪಿ ಎಸ್ ಪಿ ಲಕ್ಷ್ಮಣ ಬಿ.ನಿಂಬರ್ಗಿ ವರ್ಗಾವಣೆ

ಉಡುಪಿ: ಜಿಲ್ಲಾ ಪೊಲೀಸ್ ವರಿಷ್ಠಾಧಕಾರಿ ಲಕ್ಷ್ಮಣ ಬಿ. ನಿಂಬರ್ಗಿ ಅವರನ್ನು ಬೆಂಗಳೂರು ನಿಸ್ತಂತು ವಿಭಾಗದ ಎಸ್ ಪಿ ಹುದ್ದೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇವರಿಂದ ತೆರವಾಗುವ ಸ್ಥಾನಕ್ಕೆ ಬೆಂಗಳೂರಿನ ಕೆಎಸ್ಆರ್ ಪಿ (ರಾಜ್ಯ ಸಶಸ್ತ್ರ ಮೀಸಲು ಪಡೆ) ಕಮಾಂಡೆಂಟ್ ಆಗಿರುವ ನಿಶಾ ಜೇಮ್ಸ್ ನೇಮಕಗೊಂಡಿದ್ದಾರೆ.

ನಿಕಟಪೂರ್ಎವ ಎಸ್​ಪಿ ಲಕ್ಷ್ಮಣ ನಿಂಬರ್ಗಿ ಜಿಲ್ಲೆಯ ಎಸ್​ಪಿಯಾದ ಬಳಿಕ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ, ಮಹತ್ವದ ಅಪರಾಧ ಪ್ರಕರಣ ಬೇಧಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಶಿರೂರು ಸ್ವಾಮೀಜಿ ಅನುಮಾನಸ್ಪದ ಸಾವು,‌ ಹುಸೈನಬ್ಬ ಅನುಮಾನಸ್ಪದ ಸಾವು, ಕೋಟ ಅವಳಿ ಕೊಲೆ ಪ್ರಕರಣಗಳನ್ನು ಸಮರ್ಥವಾಗಿ ಬೇಧಿಸಿದ್ದರು.

ಪೊಲೀಸ್ ಫೋನ್ ಇನ್​ನಿಂದ ಜಿಲ್ಲೆಯ ನಗರ, ಗ್ರಾಮೀಣ ಭಾಗದಲ್ಲಿ ನಡೆಯುತಿದ್ದ ಅಕ್ರಮ, ಅಪರಾಧ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತಂದಿದ್ದರು. ಕೆಲವು ಅಪರಾಧ ಪ್ರಕರಣದಲ್ಲಿ ಪೊಲೀಸರೇ ಶಾಮೀಲಾಗಿದ್ದರು. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದ್ದರು.


Spread the love