ಉಡುಪಿ: ಕನ್ನಡ ಕಿರುಚಿತ್ರ “ಮಾನವೀಯತೆ”ಗೆ ಚಿತ್ರೀಕರಣಕ್ಕೆ ಚಾಲನೆ

Spread the love

ಉಡುಪಿ: ಕನ್ನಡ ಕಿರುಚಿತ್ರ “ಮಾನವೀಯತೆ”ಗೆ ಶೀರೂರು ಶ್ರೀ ಲಕ್ಷೀವರ ತೀರ್ಥ ಸ್ವಾಮೀಜಿಯವರು ಶುಕ್ರವಾರ ಕ್ಯಾಮಾರ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

23

ಇಂದಿನ ಮೊಬೈಲ್ ಯುಗದಲ್ಲಿ ಮಾನವೀಯತೆಯೇ ಇಲ್ಲದ ಪರಿಸ್ಥಿತಿ ಇದ್ದು, ಇತ್ತಿಚೀನ ಕಾಲದಲ್ಲಿ ಹೆಚ್ಚಿನ ಅಪಘಾತ ಸಂಭವಿಸಿದ ಸಂದರ್ಭ ಜನರು ಮಾನವೀಯತೆ ಮರೆತು ತಮ್ಮ ತಮ್ಮ ಮೊಬೈಲ್‍ಗಳಲ್ಲಿ ಛಾಯಚಿತ್ರವನ್ನು ತೆಗೆಯುವುದರಲ್ಲಿ ತಲ್ಲಿನರಾಗಿರುತ್ತಾರೆ, ನಂತರ ಅದನ್ನು ವಾಟ್ಸಪ್ ಮೂಲಕ ಎಲ್ಲರಿಗೂ ರವಾನಿಸುತ್ತಾರೆ. ಇಂತಹ
ಅಪಫಾತದಲ್ಲಿ ನಮ್ಮ ಮನೆಯವರೇ ಇದ್ದಿರಬಹುದಾದ ಕಥೆ ಹೊಂದಿದ ಕಿರುಚಿತ್ರವಿದು.
ಈ ಸಂದರ್ಭ ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ಸೂರಿ ಶೆಟ್ಟಿ ಕಾಪು, ವಿಜಯ್ ಆರ್ ನಾಯಕ್, ಸಂದೀಪ್ ಕುಂದರ್,ಪ್ರದೀಪ್ ಶೆಟ್ಟಿ ಕುಕ್ಕಿಕಟ್ಟೆ, ಸುಜೀತ್ ನಿಂಜೂರು,ದೀಪಕ್ ಮೂಡುಬೆಳ್ಳೆ, ಉದಯ ಕುಲಾಲ್ ಉಪಸ್ಥಿತರಿದ್ದರು.
ಸುರೇಂದ್ರ ಮಾರ್ಪಳ್ಳಿಯವರ ಸಾರಥ್ಯದಲ್ಲಿ ನಿರ್ಮಾಣವಾಗಲಿರುವ ಕಿರುಚಿತ್ರಕ್ಕೆ ಸುರೇಂದ್ರ ಪಣಿಯೂರು ಛಾಯಾಗ್ರಹಣ ಮಾಡಲಿರುವರು. ಕಾಪುವಿನ ಅಪತ್ಪಾಂದವ ಎಂದೇ ಖ್ಯಾತಿ ಪಡೆದಿರುವ ಸೂರಿ ಶೆಟ್ಟಿ ಚಿತ್ರದಲ್ಲಿ ನಟಿಸಿರುವರು.
ಉಡುಪಿ ಜಿಲ್ಲಾ ಎಸ್ ಪಿ. ಅಣ್ಣಾಮಲೈ ಅವರು ಅಪಾಘಾತ ನಡೆದ ಸಂದರ್ಭ ಸಾರ್ವಜನಿಕರು ಯಾವ ರೀತಿ ಸಹಾಯ ಮಾಡಬಹುದು ಎಂಬ ಸಂದೇಶವನ್ನು ಈ ಕಿರುಚಿತ್ರದಲ್ಲಿ ನೀಡಲಿರುವರು.


Spread the love