ಉಡುಪಿ: ಕಾಲೇಜು ವಿದ್ಯಾರ್ಥಿಗಳ ಜಾಲಿ ರೈಡ್‍ಗೆ ಬ್ರೇಕ್ ಹಾಕಿದ ಎಸ್ ಪಿ ಅಣ್ಣಾಮಲೈ

Spread the love

ಉಡುಪಿ: ಉಡುಪಿ-ಮಣಿಪಾಲ ರಸ್ತೆಯಲ್ಲಿ ಜಾಲಿ ರೈಡ್‍ನಲ್ಲಿ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಮಂಗಳವಾರ ಬ್ರೇಕ್ ಹಾಕುವ ಮೂಲಕ ಉಡುಪಿ ಎಸ್‍ಪಿ ಕೆ. ಅಣ್ಣಾಮಲೈ ಬಿಸಿ ಮುಟ್ಟಿಸಿದ್ದಾರೆ.

ಮಂಗಳವಾರ ಸಾಯಂಕಾಲ ತಾನೇ ಸ್ವತಃ ಶಾರದಾ ಕಲ್ಯಾಣ ಮಂಟಪದ ಬಳಿ ಡ್ಯೂಟಿ ಮಾಡಿದ ಎಸ್‍ಪಿ ವಿದ್ಯಾರ್ಥಿಗಳ ಜಾಲಿ ರೈಡ್‍ಗೆ ತಡೆಯೊಡ್ಡಿದ್ದಾರೆ. ವಿದ್ಯಾರ್ಥಿಗಳ ಬೈಕ್‍ಗಳ ಆರ್‍ಸಿ ವಶಕ್ಕೆ ಪಡೆದುಕೊಂಡಿರುವ ಎಸ್‍ಪಿ ವಿದ್ಯಾರ್ಥಿಗಳಿಗೆ  ನೋಟಿಸ್ ಕೊಟ್ಟು ಹೆತ್ತವರನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ.

spstudentbikeride 21-07-2015 22-07-018 spstudentbikeride 21-07-2015 22-07-016 spstudentbikeride 21-07-2015 22-07-14

ಈ ಹಿಂದೆ ಕೆಲವರಿಗೆ ಎಚ್ಚರಿಕೆ ನೀಡಿದ್ದರೂ ಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೆ ಹೆಲ್ಮೆಟ್ ಉಪಯೋಗಿಸಲು ಕೂಡ ಸೂಚನೆ ನೀಡಲಾಗಿದೆ ಆದರೂ ಕೆಲವು ವಿದ್ಯಾರ್ಥಿಗಳ ಅತೀ ವೇಗದ ಚಾಲನೆ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಲಿಲ್ಲ ಆದ್ದರಿಂದ ಇಂದು ತಾನೇ ಸ್ವತಃ ಕಾರ್ಯಾಚರಣೆ ನಡೆಸಿದೆ. ಇಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾಯಿತು ಇನ್ನು ಹೆತ್ತವರಿಗೆ ಎಚ್ಚರಿಕೆ ನೀಡಲು ನಿರ್ಧರಿಸಿದ್ದೇನೆ ಎಂದು ಎಸ್‍ಪಿ ಮ್ಯಾಂಗಲೋರಿಯನ್ ಪ್ರತಿನಿಧಿಗೆ ತಿಳಿಸಿದ್ದಾರೆ.

ಮಣಿಪಾಲ-ಉಡುಪಿ ರಸೆಯಲ್ಲಿ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುತ್ತವೆ. ಅಲ್ಲದೆ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ವಿದ್ಯಾರ್ಥಿಗಳಂತೂ ಈ ರಸ್ತೆಯಲ್ಲಿ ಮಿತಿಗಿಂತ ಹೆಚ್ಚು ವೇಗದಲ್ಲಿ ಹೋಗುತ್ತಾರೆ. ಎಸ್‍ಪಿಯವರ ಈ ಕಾರ್ಯದಿಂದ ಸ್ವಲ್ಪ ಮಟ್ಟಿಗೆ ವಿದ್ಯಾರ್ಥಿಗಳ ವೇಗಕ್ಕೆ ಕಡಿವಾಣ ಬೀಳಲಿದೆ.


Spread the love