ಉಡುಪಿ: ಕುಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸಿ: ವನಿತಾ ತೊರವಿ

Spread the love

ಉಡುಪಿ: ಕುಗ್ರಾಮಗಳಿಂದ ಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒಗದಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ಎಸ್.ತೊರವಿ ಹೇಳಿದ್ದಾರೆ. ಹೇಳಿದರು.

ಅವರು ಮಂಗಳವಾರ ಬೈಂದೂರಿನ ಮೃತ ವಿದ್ಯಾರ್ಥಿನಿ ಅಕ್ಷತಾ ಮನೆಗೆ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿ , ಮೃತ ವಿದ್ಯಾರ್ಥಿನಿಯ ಶಾಲೆ ಮತ್ತು ಕೊಲೆಗೀಡಾದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಪೋಷಕರು ಇಚ್ಛಿಸಿದಲ್ಲಿ,   ಮೃತ ವಿದ್ಯಾರ್ಥಿನಿಯ  ಸಹೋದರಿಯರನ್ನು ಆಯೋಗ ತಮ್ಮ  ಅಧೀನಕ್ಕೆ ತೆಗೆದುಕೊಂಡು,  ಅವರಿಗೆ  ಅವರ ಇಷ್ಟದ ಯಾವುದೇ ಶಾಲೆಯಲ್ಲಿ  ಉಚಿತ ಶಿಕ್ಷಣಕ್ಕೆ  ವ್ಯವಸ್ಥೆ ಮಾಡಲಿದ್ದು, ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಆಯೋಗ ಭರಿಸಲು ಸಿದ್ದವಿದೆ ಎಂದು ವನಿತ ಹೇಳಿದರು.

ಬೈಂದೂರಿನಲ್ಲಿ ನಡೆದ ಪ್ರಕರಣಗಳಿಂದ,  ಕುಗ್ರಾಮ ಮತ್ತು ಅರಣ್ಯ ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶಗಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುವ ಪರಿಸ್ಥಿತಿ ಬಂದಿದೆ, ಈಗಾಗಲೇ ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಅದರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಅಧಿಕ, ಆದ್ದರಿಂದ ದೂರ ಪ್ರದೇಶಗಳಿಂದ

ಶಾಲೆಗೆ ಬರುವ ಮಕ್ಕಳಿಗೆ ರಾಜ್ಯ ಸರ್ಕಾರಿ ಬಸ್ ಗಳನ್ನು ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.

ಮಕ್ಕಳನ್ನು ಮೊಬೈಲ್ ಮತ್ತು ಇಂಟರ್ ನೆಟ್ ನಿಂದ  ಕನಿಷ್ಠ ಪಿಯು ಶಿಕ್ಷಣದವೆರೆಗಾದರೂ ಆದಷ್ಟು ದೂರ ಇರುವಂತೆ ಪೋಷಕರು ಎಚ್ಚರಿಕೆ ವಹಿಸಬೇಕು , ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಯಂ   ರಕ್ಷಣೆ ಕಲೆಯನ್ನು ಕಲಿಸಬೇಕು ಹಾಗೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ  ಯೋಗ ಶಿಕ್ಷಣ ಮ್ತು ಮೌಲಿಕ ಶಿಕ್ಷಣ ನೀಡಬೇಕು ಇದರಿಂದ ವಿದ್ಯಾರ್ಥಿಗಳಲ್ಲಿ ಅಪರಾಧ ಪ್ರವೃತ್ತಿ ತಡೆಯಬಹುದು  ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಕ್ಕಳ ರಕ್ಷಣೆ ಸಮಾಜದ , ಸರ್ಕಾರದ ಹಾಗೂ ಪ್ರತಿಯೊಬ್ಬರ ಜವಾಬ್ದಾರಿ, ಮಕ್ಕಳಿಗೆ ಮೌಲಿಕ ಶಿಕ್ಷಣ ಮನೆಯಿಂದ ಮತ್ತು ಶಾಲೆಯಿಂದ ಪ್ರಾರಂಭವಾಗಬೇಕು, ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂಹ ಹಲವು ಕಾರ್ಯಕ್ರಮಗಳನ್ನು ಆಯೋಗ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಗ್ರೇಸಿ ಗೋನ್ಸಾಲ್ವಿಸ್ ಉಪಸ್ಥಿತರಿದ್ದರು.

 


Spread the love