ಉಡುಪಿ ಜಲ್ಲೆಯಲ್ಲಿ ಲೋಕೋಪಯೋಗಿ ಸಚಿವರ ಪ್ರವಾಸ

Spread the love

ಉಡುಪಿ ಜಲ್ಲೆಯಲ್ಲಿ ಲೋಕೋಪಯೋಗಿ ಸಚಿವರ ಪ್ರವಾಸ

ಉಡುಪಿ : ಉಡುಪಿ ಜಲ್ಲೆಯಲ್ಲಿ ರಾಜ್ಯದ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಮಾರ್ಚ್ 7 ರಿಂದ 8 ರ ವರೆಗೆ ಪ್ರವಾಸ ಕೈಗೊಳ್ಳುತ್ತಿದ್ದು ಪ್ರವಾಸ ವಿವರ ಕೆಳಗಿನಂತಿದೆ

ಮಾರ್ಚ್ 7 ರಂದು ಮಧ್ಯಾಹ್ನ 3.30 ಕ್ಕೆ ಕಾಪು ವಿಧಾನಭಾ ಕ್ಷೇತ್ರದ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗಳ ಪರಿವೀಕ್ಷಣೆ, 4.30 ಕ್ಕೆ ಮಲ್ಪೆ ಬಂದರು ಮತ್ತು ವಡಬಾಂಡೇಶ್ವರ ಬೀಚ್ ನಲ್ಲಿ ಕೈಗೊಂಡಿರುವ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗಳ ಪರಿವೀಕ್ಷಣೆ, 6 ಕ್ಕೆ ಹಂಗಾರಕಟ್ಟೆ ಬಂದರು ವೀಕ್ಷಣೆ, 7 ಕ್ಕೆ ಕುಂದಾಪುರ ಕೋಡಿಯಲ್ಲಿ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗಳ ಪರಿವೀಕ್ಷಣೆ, ನಂತರ ವಾಸ್ತವ್ಯ.

ಮಾರ್ಚ್ 8 ರಂದು ಬೆ.8.30 ಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿನ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗಳ ಪರಿವೀಕ್ಷಣೆ ನಂತರ ಹೊನ್ನಾವರಕ್ಕೆ ತೆರಳುವರು.


Spread the love