ಉಡುಪಿ ಜಿಲ್ಲಾ ಡಿ.ಎ.ಆರ್ ಪೊಲೀಸ್ ಕಚೇರಿಯಲ್ಲಿ ಅದ್ದೂರಿ ಆಯುಧ ಪೂಜೆ

Spread the love

ಉಡುಪಿ ಜಿಲ್ಲಾ ಡಿ.ಎ.ಆರ್ ಪೊಲೀಸ್ ಕಚೇರಿಯಲ್ಲಿ ಅದ್ದೂರಿ ಆಯುಧ ಪೂಜೆ

ಉಡುಪಿ : ಸದಾ ಕಳ್ಳರು, ಕೇಸು ಬಂದೋಬಸ್ತ್ ಎನ್ನುತ್ತಿದ್ದ ಜಿಲ್ಲೆಯ ಪೊಲೀಸರು ಶನಿವಾರ ಆಯುಧ ಪೂಜೆಯನ್ನು ಅದ್ದೂರಿಯಾಗಿ ಆಚರಿಸಿದರು.

ಜಿಲ್ಲೆಯ ಡಿಎಆರ್ ಕಚೇರಿಯಲ್ಲಿ ವಿಜೃಂಭಣೆಯಿಂದ ಆಯುಧಪೂಜೆ ಹಾಗೂ ದಸರಾ ಹಬ್ಬವನ್ನು ಆಚರಿಸಲಾಯಿತು.

ಪೊಲೀಸ್ ಇಲಾಖೆಯಲ್ಲಿ ಬಳಸಲಾಗಿದ್ದ ಪುರಾತನ ಪೊಲೀಸ್ ರೈಫಲ್ಸ್ ಸೇರಿದಂತೆ ಲೈಟ್ ಮಿಷನ್ ಗನ್, ಸೆಲ್ಫ್ ಲೋಡಿಂಗ್ ರೈಫಲ್, ಎಕೆ 47, ಡಿ-ಸ್ಯಾಟ್ ವಾಹನಗಳು ಸೇರಿದಂತೆ ಆಧುನಿಕ ಮಾದರಿಯ ಆಯುಧಗಳಿಗೆ ಪೂಜೆ ಸಲ್ಲಿಸಲಾಯ್ತು. ಕಚೇರಿಯ ಪೊಲೀಸ್ ವಾಹನಗಳಿಗೆ ಆಯುಧ ಪೂಜೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಆಯುಧಪೂಜೆ ಕಾರ್ಯದಲ್ಲಿ ಭಾಗಿಯಾದ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಪೊಲೀಸ್ ಸಿಬ್ಬಂದಿಗೆ ಸಿಹಿ ನೀಡಿ ಹಬ್ಬದ ಶುಭಾಶಯ ಕೋರಿದರು.


Spread the love