ಉಡುಪಿ ಜಿಲ್ಲಾ ನೂತನ ವಾರ್ತಾಧಿಕಾರಿಯಾಗಿ ಬಿ. ಮಂಜುನಾಥ್ ಅಧಿಕಾರ ಸ್ವೀಕಾರ

Spread the love

ಉಡುಪಿ ಜಿಲ್ಲಾ ನೂತನ ವಾರ್ತಾಧಿಕಾರಿಯಾಗಿ ಬಿ. ಮಂಜುನಾಥ್ ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ಜಿಲ್ಲೆಯ ನೂತನ ವಾರ್ತಾಧಿಕಾರಿಗಳಾಗಿ ಬಿ. ಮಂಜುನಾಥ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಈ ವರೆಗೆ ಉಡುಪಿ ಜಿಲ್ಲೆಯ ಪ್ರಭಾರ ವಾರ್ತಾಧಿಕಾರಿಗಳಾಗಿ ಹೆಚ್ಚುವರಿ ಹುದ್ದೆ ನಿರ್ವಹಿಸುತ್ತಿದ್ದ ದಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಅವರಿಂದ ನೂತನ ವಾರ್ತಾಧಿಕಾರಿ ಮಂಜುನಾಥ್ ಅವರು ಅಧಿಕಾರವನ್ನು ವಹಿಸಿಕೊಂಡರು.

ನೂತನ ವಾರ್ತಾಧಿಕಾರಿ ಮಂಜುನಾಥ್ ಅವರು ಚಿಕ್ಕಮಗಳೂರು ಜಿಲ್ಲೆಯಿಂದ ಪದೊನ್ನತಿ ಹೊಂದಿ ಉಡುಪಿಯ ವಾರ್ತಾಧಿಕಾರಿಯಾಗಿ ನೇಮಕವಾಗಿದ್ದಾರೆ.


Spread the love