ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‍ನಿಂದ ಎಸ್.ಪಿ. ನಿಶಾ ಜೇಮ್ಸ್ ಭೇಟಿ

Spread the love

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‍ನಿಂದ ಎಸ್.ಪಿ. ನಿಶಾ ಜೇಮ್ಸ್ ಭೇಟಿ

ಉಡುಪಿ: ಉಡುಪಿ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಪೋಲಿಸ್ ಅಧೀಕ್ಷಕರಾದ ನಿಶಾ ಜೇಮ್ಸ್ ಅವರಿಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಶುಭ ಕೋರಲಾಯಿತು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆಯವರು ನಿಶಾ ಜೇಮ್ಸ್ ಅವರಿಗೆ ಹೂ ಗುಚ್ಚ ನೀಡಿ ಶುಭ ಹಾರೈಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ಜ್ಯೋತಿ ಕೆ. ಹೆಬ್ಬಾರ್, ಹಿರಿಯ ನಾಯಕಿಯರಾದ ಜಯಶ್ರೀ ಕೃಷ್ಣರಾಜ್, ಐರಿನ್ ಅಂದ್ರಾದೆ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಚಂದ್ರಿಕಾ ಶೆಟ್ಟಿ, ರೊಶನಿ ಒಲಿವರ್, ಶಾಂತಿ ಪಿರೇರಾ, ಮಮತಾ ಶೆಟ್ಟಿ, ಡಾ| ಸುನೀತಾ ಶೆಟ್ಟಿ, ಡೆಲ್ಮಾ, ಮರಿನಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love