ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಗರ್ಭಿಣಿ ಮಹಿಳೆಗೆ ಆಸ್ಪತ್ರೆಗೆ ಸಾಗಿಸಿದ ರಾಜೀವಿ ಅವರಿಗೆ ಸನ್ಮಾನ

Spread the love

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಗರ್ಭಿಣಿ ಮಹಿಳೆಗೆ ಆಸ್ಪತ್ರೆಗೆ ಸಾಗಿಸಿದ ರಾಜೀವಿ ಅವರಿಗೆ ಸನ್ಮಾನ

ಉಡುಪಿ: ಗರ್ಭಿಣಿ ಮಹಿಳೆಯೊಬ್ಬರನ್ನು ಮಧ್ಯರಾತ್ರಿ ವೇಳೆ ಹೆರಿಗೆಗಾಗಿ ಪೆರಣಂಕಿಲದಿಂದ ಉಡುಪಿ ಆಸ್ಪತ್ರೆಗೆ ತಾನೇ ರಿಕ್ಷಾ ಚಲಾಯಿಸುವುದರ ಮೂಲಕ ಕರೆದುಕೊಂಡು ಹೋಗಿ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಪ್ರಶಂಸೆಗೆ ಪಾತ್ರರಾಗಿರುವ ಆಶಾ ಕಾರ್ಯಕರ್ತೆ ರಾಜೀವಿ ಅವರನ್ನು ಇಂದು ಅವರ ಪೆರಂಣಂಕಿಲದಲ್ಲಿರುವ ಅವರ ಮನೆಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗೀತಾ ವಾಗ್ಳೆ, ಹಿರಿಯಡ್ಕ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಉಡುಪಿ ತಾಲೂಕು ಪಂಚಾಯತ್ ಸದಸ್ಯರೂ ಆಗಿರುವ ಸಂಧ್ಯಾ ಶೆಟ್ಟಿ,ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ,ಕಾಪು ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಶಂಕರ್ ಸುವರ್ಣ, ಲತಾ ಕಾಮತ್, ಗ್ರೇಸಿ ಕರ್ಡೋಜ, ಸರೋಜಿನಿ ಶೆಟ್ಟಿ, ಉಷಾ,ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗುರುದಾಸ್ ಭಂಡಾರಿ, ಪ್ರಕಾಶ್ ಕಾಮತ್ , ಬಾಬು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.


Spread the love