ಉಡುಪಿ ಜಿಲ್ಲೆಯಲ್ಲಿ ಈದ್ ಉಲ್ ಫಿತರ್ ಹಬ್ಬ: ಬುಧವಾರ (ಇಂದು) ಸರಕಾರಿ ರಜೆ

Spread the love

ಉಡುಪಿ ಜಿಲ್ಲೆಯಲ್ಲಿ ಈದ್ ಉಲ್ ಫಿತರ್ ಹಬ್ಬ: ಬುಧವಾರ (ಇಂದು) ಸರಕಾರಿ ರಜೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಎ.10 ರಂದು ಈದ್ ಉಲ್ ಫಿತರ್ ಹಬ್ಬವಿರುವುದರಿಂದ, ಗುರುವಾರದ ಬದಲಾಗಿ ಬುಧವಾರ ಸರಕಾರಿ ರಜಾ ದಿನವನ್ನಾಗಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಘೋಷಿಸಿದ್ದಾರೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯದೆಲ್ಲೆಡೆ ಗುರುವಾರ ಎ.11 ರಂದು ಈದ್ ಉಲ್ ಫಿತರ್ ಹಬ್ಬದ ಆಚರಣೆ ನಡೆಯಲಿದೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಕರ್ನಾಟಕ ಸರಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾದಿನಗಳ ಪಟ್ಟಿಯಲ್ಲಿ ದಿನಾಂಕ: 11-04-2024 ರಂದು ಖುತುಬ್ ಎ ರಂಜಾನ್ ರಂದು ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿರುತ್ತದೆ.

ಖುತುಬ್ ‘ಎ ರಂಜಾನ್ ಹಬ್ಬಕ್ಕೆ ಸಂಬಂಧಿಸಿದಂತೆ ದಿನಾಂಕ 09-04-2024 ರಂದು ಚಂದ್ರದರ್ಶನವಾಗಿರುವುದರಿಂದ ದಿನಾಂಕ 11.04.2024 ರ ಬದಲಾಗಿ ದಿನಾಂಕ : 10.04.2024 ರ ಬುಧವಾರದಂದು ರಜೆ ಘೋಷಿಸಲು ಇರುವ ಸಾರ್ವಜನಿಕ ಬೇಡಿಕೆಯ ಹಿನ್ನಲೆಯಲ್ಲಿ 2024ನೇ ಸಾಲಿನ ಖುತುಬ್ ಎ ರಂಜಾನ್ ಹಬ್ಬದ ರಜೆಯನ್ನು ಉಡುಪಿ ಜಿಲ್ಲಾದ್ಯಂತ ದಿನಾಂಕ: 11.04.2024 ರ ಗುರುವಾರದಂದು ರದ್ದುಗೊಳಿಸಿ ದಿನಾಂಕ: 10.04.2024 ರ ಬುಧವಾರರಂದು ಸಾರ್ವತ್ರಿಕರಜೆಯನ್ನು ಘೋಷಿಸಿ ಆದೇಶಿಸಲಾಗಿದೆ. (10.04.2024 ರಂದು ಪೂರ್ವ ನಿಯೋಜಿತಗೊಂಡಿರುವ ಶಾಲಾ ಕಾಲೇಜುಗಳ ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ) ದಿನಾಂಕ: 11.04.2024 ರ ಗುರುವಾರರಂದು ಕರ್ತವ್ಯದ ದಿನವೆಂದು ಪರಿಗಣಿಸಲು ಸೂಚಿಸಿದೆ ಎಂದು ತಿಳಿಸಿದ್ದಾರೆ.


Spread the love