ಉಡುಪಿ ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ – ಚಾಂತಾರುವಿನ 70 ವರ್ಷದ ಮಹಿಳೆ ಸಾವು

Spread the love

ಉಡುಪಿ ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ – ಚಾಂತಾರುವಿನ 70 ವರ್ಷದ ಮಹಿಳೆ ಸಾವು

ಉಡುಪಿ: ಕೊರೋನಾ ಮಹಾಮಾರಿಗೆ ಉಡುಪಿ ಜಿಲ್ಲೆಯಲ್ಲಿ 70 ವರ್ಷ ವಯಸ್ಸಿನ ಮಹಿಳೆ ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್ -19 ನಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.

ಅಸ್ತಮಾ ,ಶೀತ-ಜ್ವರದಿಂದ ಕೆಲ ಸಮಯದಿಂದ ಬಳಲುತಿದ್ದ ಬ್ರಹ್ಮಾವರ ತಾಲೂಕಿನ ಚಾಂತಾರುವಿನ ಮಹಿಳೆ ಸಾವನಪ್ಪಿದ್ದು, ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಬುಧವಾರ ರಾತ್ರಿಯಷ್ಟೇ ಪಾಸಿಟಿವ್ ಬಂದಿತ್ತು. ಆಸ್ಪತ್ರೆಗೆ ಸೇರಿಸಲು ಸಿದ್ಧತೆ ನಡೆಯುತಿದ್ದಂತೆ ಮನೆಯಲ್ಲೇ ಮಹಿಳೆ ಮೃತಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ 19 ಗೆ ಮೃತಪಟ್ಟವರ ಸಂಖ್ಯೆ 12 ಏರಿಕೆಯಾಗಿದೆ.


Spread the love