ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಪ್ರಮೀಳಾ ಡೇಸಾ ಆಯ್ಕೆ

Spread the love

ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಪ್ರಮೀಳಾ ಡೇಸಾ ಆಯ್ಕೆ

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ, ಉಡುಪಿ ಜಿಲ್ಲೆ – ಇದರ 2019-2020 ಸಾಲಿನ ನೂತನ ಅಧ್ಯಕ್ಷರಾಗಿ ಕುಂದಾಪುರದ ಹಂಗ್ಳೂರಿನ ಪ್ರಮೀಳಾ ಡೇಸಾರವರು ಚುನಾಯಿತರಾಗಿದ್ದಾರೆ.

ಉಡುಪಿ ಧರ್ಮಾಧ್ಯಕ್ಷರ ನಿವಾಸದ ಸಭಾಗೃಹದಲ್ಲಿ ನಡೆದ ಚುನಾವಣೆಯನ್ನು ಸಂಘಟನೆಯ ನಿರ್ದೇಶಕರಾದ ಫಾದರ್ ರೆಜಿನಾಲ್ಡ್ ಪಿಂಟೊರವರು ನಡೆಸಿದರು.

ಇತರ ಪದಾಧಿಕಾರಿಗಳು: ನಿಕಟಪೂರ್ವ ಅಧ್ಯಕ್ಷ: ಜೆನೆಟ್ ಬರ್ಬೋಜ, ಮುದರಂಗಡಿ; ಉಪಾಧ್ಯಕ್ಷೆ ; ಫಿಲೊಮೆನಾ ಕಸ್ತೆಲೀನೊ, ಆಜೆಕಾರು; ಕಾರ್ಯದರ್ಶಿ: ಪ್ರೆಸಿಲ್ವಾ ಆಳ್ವಾ, ಕಲ್ಮಾಡಿ; ಸಹಕಾರ್ಯದರ್ಶಿ: ಹೆಲೆನ್ ಮೋನಿಸ್, ಪಾಂಬೂರ್; ಖಜನ್ದಾರ್: ಫ್ಲೇವಿಯಾ ಡಿಸೋಜ, ಶಿರ್ವಾ; ‘ಮೊತಿಯಾಂ’ ಪತ್ರಿಕೆ ಸಂಪಾದಕಿ: ಅನೀಶಾ ಪಿಂಟೊ, ಬ್ರಹ್ಮಾವರ; ಸಹಸಂಪಾದಕಿ: ನೋರಿನ್ ಲೋಬೊ, ಬಾರ್ಕೂರ್; ಕೇಂದ್ರೀಯ ಸಮಿತಿಯ ಸದಸ್ಯರು: ಜೂಡಿತ್ ಫೆರ್ನಾಂಡಿಸ್, ಉದ್ಯಾವರ; ಶಾಂತಿ ಸುವಾರಿಸ್, ಪಡುಕೋಣೆ; ಅನಿತಾ ಕ್ವಾಡ್ರಸ್, ಕಣಜಾರು.


Spread the love