ಉಡುಪಿ : ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಪ್ರಶಾಂತ್ ಭಟ್ ಪೆರಂಪಳ್ಳಿ ಆಯ್ಕೆ

Spread the love

ಉಡುಪಿ : ನವೆಂಬರ್ 18 ರಂದು ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಉಡುಪಿ ನಗರಸಭೆಯ ಮೂಡು ಪೆರಂಪಳ್ಳಿ ವಾರ್ಡಿನ ಸದಸ್ಯರಾದ ಪ್ರಶಾಂತ್ ಭಟ್ ಪೆರಂಪಳ್ಳಿ ಇವರು ಉಡುಪಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.

Prashanth Bhat

ಸಭೆಯ ಅಧ್ಯಕ್ಷತೆಯನ್ನು ಉಡುಪಿ ನಗರಸಭಾ ಅಧ್ಯಕ್ಷರಾದ ಪಿ ಯುವರಾಜ್ ವಹಿಸಿದ್ದರು. ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪುರಂದರ ಕೋಟ್ಯಾನ್ ಇವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸ್ಥಾಯಿ ಸಮಿತಿ ಸದಸ್ಯರಾದ ಪ್ರಶಾಂತ್ ಭಟ್, ವಿಜಯ ಮಂಚಿ, ರಮೇಶ್ ಪೂಜಾರಿ, ವಿಜಯ ಪೂಜಾರಿ ಬೈಲೂರು, ಹಾರ್ಮಿಸ್ ನೊರ್ಹೋನ್ಹಾ, ಶಾಂತಾರಾಂ ಸಾಲ್ವಂಕಾರ್, ಲತಾ ಆನಂದ ಸೇರಿಗಾರ್, ಜ್ಯೋತಿ ನಾಯ್ಕ್, ಶೋಭಾ ಚಂದ್ರಕಾಂತ್, ಹರೀಶ್ ರಾಮ್ ಇವರುಗಳು ಉಪಸ್ಥಿತರಿದ್ದರು.
ಸ್ಥಾಯಿ ಸಮಿತಿ ಸದಸ್ಯರಾದ ಶೋಭಾ ಕಕ್ಕುಂಜೆ ಇವರು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಭಟ್ ಪೆರಂಪಳ್ಳಿ ಇವರ ಹೆಸರನ್ನು ಸೂಚಿಸಿದರು. ಸದಸ್ಯರಾದ ಚಂದ್ರಕಾಂತ್ ನಾಯಕ್ ಅನುಮೋದಿಸಿದರು.

standingcommittee_CMC_Udupi_prashnt 19-11-2015 07-17-18 standingcommittee_CMC_Udupi_prashnt 19-11-2015 07-17-019 standingcommittee_CMC_Udupi_prashnt 19-11-2015 07-17-020

ಪ್ರಶಾಂತ್ ಭಟ್ ಪೆರಂಪಳ್ಳಿ ಇವರು ಉಡುಪಿ ನಗರಸಭೆಯ 2015-16ನೇ ಸಾಲಿನ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಯ ಸದಸ್ಯರು, ಪೌರಾಯುಕ್ತರು, ನಗರಸಭಾ ಸದಸ್ಯರಾದ ಪ್ರಶಾಂತ್ ಅಮೀನ್ ಕೊಳ, ಜನಾರ್ದನ ಭಂಡಾರ್ಕರ್, ಶಶಿರಾಜ್ ಕುಂದರ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.


Spread the love