ಉಡುಪಿ ನಗರಸಭೆಯ ಹಿಂದಿನ ಪೌರಾಯುಕ್ತ ಮಂಜುನಾಥಯ್ಯ ಮನೆ ಮೇಲೆ ಎಸಿಬಿ ದಾಳಿ

Spread the love

ಉಡುಪಿ ನಗರಸಭೆಯ ಹಿಂದಿನ ಪೌರಾಯುಕ್ತ ಮಂಜುನಾಥಯ್ಯ ಮನೆ ಮೇಲೆ ಎಸಿಬಿ ದಾಳಿ

ಉಡುಪಿ: ಶುಕ್ರವಾರ ಬೆಳ್ಳಂಬೆಳಗ್ಗೆ ಉಡುಪಿಯಲ್ಲಿ ಎಸಿಬಿ ಅಧಿಕಾರಿಗಳು ನಗರಸಭೆಯ ಹಿಂದಿನ ಪೌರಾಯುಕ್ತರ ಮನೆಗೆ ದಾಳಿ ನಡೆಸಿದ್ದಾರೆ.

ಪ್ರಸ್ತುತ ಮಂಗಳೂರಿನ ಸರ್ಕಾರಿ ಶಿಕ್ಷಕ ತರಬೇತಿ ಕೇಂದ್ರದ ರೀಡರ್ ಮಂಜುನಾಥಯ್ಯ ಅವರ ಮಣಿಪಾಲದಲ್ಲಿರುವ ಫ್ಲಾಟಿಗೆ ದಾಳಿ ನಡೆಸಿದ್ದಾರೆ.

ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಪಶ್ಚಿಮ ವಲಯ ಎಸಿಬಿ ಎಸ್ಪಿ ಶೃತಿ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆದಿದೆ.

ಮಂಜುನಾಥಯ್ಯ ಉಡುಪಿ ನಗರಸಭೆ ಪೌರಾಯುಕ್ತನಾಗಿ ಕಾರ್ಯನಿರ್ವಹಿಸಿದ್ರು. ಅದಕ್ಕೂ ಮುನ್ನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಉಡುಪಿ ನಗರ ಸಭೆಯ ಪೌರಾಯುಕ್ತರಾಗಿದ್ದ ಅವಧಿಯಲ್ಲಿ ಮಂಜುನಾಥಯ್ಯ ಅವರ  ಮೇಲೆ ಸಾಕಷ್ಟು ಭ್ರಷ್ಟಾಚಾರ ದ ಆರೋಪ ಕೇಳಿಬಂದಿತು. ಪೌರಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮಂಜುನಾಥಯ್ಯ ಹಟಾವೊ ಉಡುಪಿ ಬಚಾವೊ ಅನ್ನೊ ಆಂದೋಲನ ವನ್ನು  ಉಡುಪಿ  ಬಿಜೆಪಿ ನಿರಂತರವಾಗಿ ನಡೆಸಿತ್ತು.

ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತ್ರ ಮಂಜುನಾಥಯ್ಯ ಮಂಗಳೂರಿಗೆ ಶಿಕ್ಷಣ ಕ್ಷೇತ್ರಕ್ಕೆ ರೀಡರ್ ಅಗಿ ನೇಮಕ ಮಾಡಲಾಗಿತ್ತು .ಸದ್ಯ ಸಾರ್ವಜನಿಕ ದೂರಿನ ಆಧಾರದಲ್ಲಿ ಎಸಿಬಿ ದಾಳಿನಡೆಸಿದ್ದು ತನಿಖೆ ಮುಂದುವರಿಸಿದೆ

ಚಿಕ್ಕಮಗಳೂರು ಕಡೂರು ಬೀರೂರಿನಲ್ಲೂ ಹಾಗೂ ಶಿವಮೊಗ್ಗ ಚೆನ್ನಗಿರಿಯಲ್ಲಿರುವ ಮಂಜುನಾಥಯ್ಯ ಅವರ ಭಾವನ ಮನೆಗೂ ದಾಳಿ ನಡೆದಿದೆ.


Spread the love