ಉಡುಪಿ ನಗರ ಠಾಣೆ ಪಿ.ಎಸ್.ಐ ಅಮಾನತು ರದ್ದುಗೊಳಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ – ಅನ್ಸಾರ್ ಅಹಮದ್

Spread the love

ಉಡುಪಿ ನಗರ ಠಾಣೆ ಪಿ.ಎಸ್.ಐ ಅಮಾನತು ರದ್ದುಗೊಳಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ – ಅನ್ಸಾರ್ ಅಹಮದ್

ಉಡುಪಿ: ಹಲವಾರು ವರ್ಷಗಳಿಂದ ಉಡುಪಿ ನಗರ ಕಂಡಂತಹ ದಕ್ಷ, ಪ್ರಾಮಾಣಿಕ ಹಾಗೂ ನಿಯತ್ತಿನ ಅಧಿಕಾರಿಗಳಲ್ಲಿ ಉಡುಪಿ ನಗರ ಪಿಎಸ್ಐ ಅನಂತಪದ್ಮನಾಭ ಅವರನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಇದರ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅನ್ಸಾರ್ ಅಹ್ಮದ್ ಹೇಳಿದ್ದಾರೆ.

ಒಂದು ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪವನ್ನು ಅವರ ಮೇಲೆ ಹೊರಿಸಿ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಇಲಾಖೆಯ ಹಾಗೂ ಸರಕಾರದ ಅಮಾನವೀಯ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಅತ್ಯಂತ ಕಠಿಣವಾಗಿ ಖಂಡಿಸುತ್ತದೆ. ಅವರ ಅಮಾನತು ಆದೇಶವನ್ನು ಎರಡು ದಿನಗಳೊಳಗೆ ರದ್ದುಗೊಳಿಸಿದ್ದೇ ಇದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ದಿನಾಂಕ ನಗರ ಠಾಣೆಯ ಎದುರು ಉಪವಾಸ ಸತ್ಯಾಗ್ರಹ ವನ್ನು ಹಮ್ಮಿಕೊಂಡು ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಅನ್ಸರ್ ಅಹಮದ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love