ಉಡುಪಿ: ನಿಂತಿದ್ದ ಕಾರಿಗೆ ಬೈಕ್ ಢಿಕ್ಕಿ: ಸವಾರ ಮೃತ್ಯು

Spread the love

ಉಡುಪಿ: ನಿಂತಿದ್ದ ಕಾರಿಗೆ ಬೈಕ್ ಢಿಕ್ಕಿ: ಸವಾರ ಮೃತ್ಯು

ಉಡುಪಿ: ಬೈಕೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ನಿಟ್ಟೂರು ಕಾಂಚನ ಹುಂಡೈ ಕಾರಿನ ಶೋರೂಮ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ.

ಮೃತರನ್ನು ಸ್ವಸ್ತಿಕ್ ಎಂದು ಗುರುತಿಸಲಾಗಿದೆ. ಇವರು ಮಾ.7ರಂದು ಮಧ್ಯರಾತ್ರಿ ವೇಳೆ ಬೈಕಿನಲ್ಲಿ ನಿಟ್ಟೂರು ಕಡೆಯಿಂದ ಉಡುಪಿ ಕರಾವಳಿ ಕಡೆಗೆ ಹೋಗುತ್ತಿದ್ದು, ಅತೀವೇಗದಿಂದ ಚಲಾಯಿಸಿದ ಪರಿಣಾಮ ಬೈಕ್, ಶೋರೂಮಿನ ಎದುರುಗಡೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಕಾರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರ ಪರಿಣಾಮ ಸವಾರ ಸ್ವಸ್ತಿಕ್ ಬೈಕ್ ಸಮೇತ ಬಿದ್ದು ಗಂಭೀರವಾಗಿ ಗಾಯಗೊಂಡರು. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love