ಉಡುಪಿ: ಪಿಯುಸಿ ಪರೀಕ್ಷೆ ಜಿಲ್ಲೆಯಲ್ಲಿ ಹುಡುಗಿಯರು ಮೇಲುಗೈ; ಗ್ರಾಮೀಣ ವಿದ್ಯಾರ್ಥಿಗಳು ಮುಂದೆ

Spread the love

ಉಡುಪಿ ಃ ಈ ಬಾರಿಯೂ ಪದವಿ ಪೂರ್ವ ಪರೀಕ್ಷೆಯ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ
ಹುಡುಗಿಯರೇ ಹುಡುಗರಿಗಿಂತ ಮುಂದಿದ್ದಾರೆ, ಅಲ್ಲದೇ ಈ ಬಾರಿಯೂ ಗ್ರಾಮೀಣ ಪ್ರದೇಶದ
ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ್ದಾರೆ.

23
ಉಡುಪಿ ಜಿಲ್ಲೆ ಈ ಬಾರಿ ಶೇ 93.53 ಫಲಿತಾಂಶ ದಾಖಲಿಸಿ ರಾಜ್ಯಕ್ಕೆ 2ನೇ
ಸ್ಥಾನದಲ್ಲಿದೆ. ಜಿಲ್ಲೆಯ ವಿದ್ಯಾರ್ಥಿಗಳು  ವಿಜ್ಞಾನ ವಿಭಾಗದಲ್ಲಿ ಶೇ 91.49,
ವಾಣಿಜ್ಯ ವಿಭಾಗದಲ್ಲಿ ಶೇ 93.40 ಮತ್ತು ಕಲಾ ವಿಭಾಗದಲ್ಲಿ ಶೇ 90.28 ಫಲಿತಾಂಶ
ಗಳಿಸಿದ್ದಾರೆ.
ಜಿಲ್ಲೆಯಲ್ಲಿ 8011 ಹುಡುಗಿಯರು ಮತ್ತು 7421 ಹುಡುಗರು ಸೇರಿ ಒಟ್ಟು 15,432
(ಅವರಲ್ಲಿ 1242 ಖಾಸಗಿ, 420 ಪುನಾರವರ್ತಿತ) ವಿದ್ಯಾರ್ಥಿಗಳು ಪರಿಕ್ಷೆಗೆ
ಬರೆದಿದ್ದರು. ಅವರಲ್ಲಿ 7318 (ಶೇ 91.35) ಹುಡುಗಿಯರು ಮತ್ತು 6031 (ಶೇ 81.27)
ಹುಡುಗರು ಸೇರಿ ಒಟ್ಟು 13349 ಮಂದಿ ಪಾಸಾಗಿದ್ದಾರೆ.
ಗ್ರಾಮೀಣ ಪ್ರದೇಶದ 7543 ವಿದ್ಯಾರ್ಥಿಗಳು ಪರೀಕ್ಷೆ ಬರೆದು. ಅವರಲ್ಲಿ 6972 (ಶೇ
92.43) ಮಂದಿ ಪಾಸಾಗಿದ್ದಾರೆ. ಆದರೇ ನಗರ ಪ್ರದೇಶದ 6227 ವಿದ್ಯಾರ್ಥಿಗಳು ಪರೀಕ್ಷೆ
ಬರೆದು, ಅವರಲ್ಲಿ 5740 (ಶೇ 92.18) ಮಂದಿ ಪಾಸಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ 1780 ವಿದ್ಯಾರ್ಥಿಗಳು ಪರೀಕ್ಷೆ ಬರೆದು 1185 (ಶೇ 66.57)
ಮಂದಿ ಪಾಸಾಗಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ 13652 ವಿದ್ಯಾರ್ಥಿಗಳು ಪರೀಕ್ಷೆ
ಬರೆದು 12164 (ಶೇ 89.10) ಮಂದಿ ಪಾಸಾಗಿದ್ದಾರೆ.
ಪರಿಶಿಷ್ಟ ಜಾತಿಯ 864 ವಿದ್ಯಾರ್ಥಿಗಳಲ್ಲಿ 715 (ಶೇ 82.75), ಪರಿಶಿಷ್ಟ ಪಂಗಡದ
649ರಲ್ಲಿ 533 (ಶೇ 82.13) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 8 ಪದವಿ ಪೂರ್ವ ಕಾಲೇಜುಗಳು ಶೇ 100 ಫಲಿತಾಂಶವನ್ನು ದಾಖಲಿಸಿವೆ.
ಅವುಗಳು, ಕುಕ್ಕಜೆಯ ಸ.ಪ.ಪೂ. ಕಾಲೇಜು, ಬೈಲೂರಿನ ಸ.ಪ.ಪೂ.ಕಾಲೇಜು, ಉಡುಪಿಯ
ವಿದ್ಯೋದಯ ಪ.ಪೂ. ಕಾಲೇಜು, ಕುಂದಾಪುರದ ಸೈಂಟ್ ಮೇರಿ ಪ.ಪೂ. ಕಾಲೇಜು, ಶೀರೂರಿನ ಗ್ರೀನ್ ವ್ಯಾಲಿ ಪ.ಪೂ. ಕಾಲೇಜು, ಸುಣ್ಣಾರಿಯ ಎಕ್ಸಲೆಂಟ್ ಪ.ಪೂ ಕಾಲೇಜು,
ಶಂಕರನಾರಾಯಣದ ಮದರ್ ಥೆರೆಸಾ ಪ.ಪೂ ಕಾಲೇಜು, ಕೋಟೇಶ್ವರದ ಗುರುಕುಲ ಪ.ಪೂ.ಕಾಲೇಜು.


Spread the love