ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಈಗ ‘ಮಂಕಿ ಕಿ ಬಾತ್’ ಆಗಿದೆ: ಜನಾರ್ದನ ಪೂಜಾರಿ

Spread the love

ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೋದಲ್ಲಿ ಆಡುವ ಮನ್ ಕಿ ಬಾತ್ ಈಗ ಮಂಕೀ ಬಾತ್ (ಮಂಗನ ಮಾತು) ಆಗಿಬಿಟ್ಟಿದೆ. ಅವರು ಚುನಾವಣೆಗೆ ಮೊದಲು ದೇಶದ ಜನತೆಗೆ ಕೊಟ್ಟಿದ್ದ ಯಾವ ಮಾತನ್ನೂ ಉಳಿಸಿಕೊಂಡಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ. ಜನಾರ್ಧನ ಪೂಜಾರಿ ಆರೋಪಿಸಿದ್ದಾರೆ.

DSC04085 DSC04091

ಅವರು ಶನಿವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಾಸ್ತಾನದ ಮುಖ್ಯಮಂತ್ರಿ ವಸುಂದರರಾಜೇ ಮತ್ತವರ ಪುತ್ರ, ಸುಷ್ಮಾ ಸ್ವರಾಜ್, ಸ್ಮೖತಿ ಇರಾನಿ, ಪಂಕಜ್ ಮುಂಡೆ ಮುಂತಾದವರ ಅಕ್ರಮಗಳ ವಿರುದ್ಧ ಮೋದಿ ಅವರ ಮನಸ್ಸಿನಿಂದ ಯಾವುದೇ ಮಾತುಗಳು ಹೊರಡುತ್ತಿಲ್ಲ. ಚುನಾವಣೆಗೆ ಮೊದಲು ದೇಶದಲ್ಲಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇನೆ ಎಂದಿದ್ದ ಮೋದಿ, ಈಗ ಏನೂ ಮಾಡದೇ ಮಾತನಾಡದೇ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬುದು ಸಾಬೀತಾಗುತ್ತಿದೆ
ಎಂದು ಪೂಜಾರಿ ಹೇಳಿದರು. ಲಲಿತ್ ಮೋದಿ ಪ್ರಕರಣದಲ್ಲಿ ಸಿಪಿಎಂ ಬಿಟ್ಟು ಮತ್ತೆಲ್ಲ ಪಕ್ಷದವರೂ ಇದ್ದಾರೆ. ಆದ್ದರಿಂದ ಆ ಬಗ್ಗೆ ತನಿಖೆ ನಡೆಯಲಿ. ಸತ್ಯಾಂಶ ಹೊರಬರಲಿ ಎಂದರು.

ಅಳಿದು ಹೋಗಿರುವ ಸರಸ್ವತಿ ನದಿಯನ್ನು ಮತ್ತೇ ಹುಡುಕುವುದಕ್ಕೆ ಮೋದಿಅವರು 20 ಸಾವಿರ ಕೋಟಿ ರು. ಖರ್ಚು ಮಾಡುವುದಾಗಿ ಮೋದಿ ಹೇಳುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಮನೆ ಇಲ್ಲದ, ಉದ್ಯೋಗ ಇಲ್ಲದ ಜನರು, ನಷ್ಟದಲ್ಲಿರುವ ರೈತರಿದ್ದಾರೆ. ಅವರಿಗೆ ಈ 20 ಸಾವಿರ ಕೋಟಿ ರು. ಖರ್ಚು ಮಾಡದೇ ಇಲ್ಲದ ನದಿಯನ್ನು ಹುಡುಕುವ ಅಗತ್ಯ ಇದೆಯೇ ? ಎಂದು ಪೂಜಾರಿ ಪ್ರಶ್ನಿಸಿದರು.

ದೇಶದ ಶೇ.70ರಷ್ಟು ಜನ ಕೃಷಿಯಲ್ಲಿ ನಿರತರಾಗಿದ್ದಾರೆ. ಅವರ ಆರ್ಥಿಕ ಪರಿಸ್ಥಿಯ ಬಗ್ಗೆ ಮೋದಿಗೆ ಚಿಂತೆಯಿಲ್ಲ. ವರದಿಯ ಪ್ರಕಾರ ಕೃಷಿಕರಿಗೆ 5 ಸಾವಿರ ರೂ ವರೆಗೂ ಆದಾಯವಿಲ್ಲ. ಕೃಷಿಗೆ, ವಿದ್ಯಾಭ್ಯಾಸಕ್ಕೆ, ಮಕ್ಕಳ ಬೆಳವಣಿಗೆಗೆ ಬಜೆಟ್‍ನಲ್ಲಿ ನೀಡುವ ಹಣದ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ, ಮಾಧ್ಯಮದವರ ಕೊಲೆ, ಆರ್‍ಟಿ, ಸಾಮಾಜಿಕ ಕಾರ್ಯರ್ತರ ಕೊಲೆಯಾಗುವಾಗಲೂ ಪ್ರಧಾನಿ ಮೋದಿ ಯಾಕೆ ಮಾತನಾಡಲಿಲ್ಲ? ಅದು ಮನ್‍ಕೀ ಬಾತ್ ಅಲ್ಲವಾ ಎಂದ  ಪ್ರಶ್ನಿಸಿದರು.

ಮಧ್ಯಪ್ರದೇಶದ ವ್ಯಾಪಂ ಹಗರಣದಲ್ಲಿ ಸುಮಾರು 2 ಸಾವಿರ ಮಂದಿ ಆರೋಪಿಗಳಾಗಿದ್ದು, 55 ಎಫ್‍ಐಆರ್ ದಾಖಲಾಗಿದೆ. ಸುಮಾರು 1900 ರಷ್ಟು ಮಂದಿಯನ್ನು ಬಂಧಿಸಲಾಗಿದೆ, ಇನ್ನೂ ಹಲವು ಮಂದಿಯನ್ನು ಬಂಧಿಸಬೇಕಾಗಿದೆ. ಆರೋಪಿಗಳ- ಸಾಕ್ಷಾೃದಾರರ ಪೈಕಿ 40 ಮಂದಿ ಸಂಶಯಾಸ್ಪದವಾಗಿ  ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣವೇನು ಎಂದು ತನಿಖೆಯಾಗಿದೆಯಾ? ಈ ಪ್ರರಕಣವನ್ನು ಸಿಬಿಐಗೆ ಕೊಡಲು ಆಗುವುದಿಲ್ಲವಾ? ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಆಗುವುದಿಲ್ಲವಾ ಎಂದು ಪೂಜಾರಿ ಪ್ರಶ್ನಿಸಿದರು.

ಕಾಂಗ್ರೆಸ್, ಬಿ.ಜೆ.ಪಿ., ಜನತಾ ದಳ, ಕಮ್ಯುನಿಸ್ಟ್ ಪಾರ್ಟಿ ಎಲ್ಲಾ ಪಕ್ಷಗಳಲ್ಲೂ ಭ್ರಷ್ಟಾಚಾರಿಗಳಿದ್ದಾರೆ, ಯಾರ ಮೇಲೂ ದಾಕ್ಷಿಣ್ಯ ಬೇಡ, ಎಲ್ಲವೂ ಹೊರಬರಲಿ ಎಂದರು.

ಡಾಂಬರು ರಸ್ತೆಯಲ್ಲಿ ಕಸ ಗುಡಿಸುವುದು ಸ್ವಚ್ಛ ಅಲ್ಲ. ಮನಸ್ಸು ಸ್ವಚ್ಛವಾಗಿರಬೇಕು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗಲೂ ಪಾಯಿಖಾನೆಯನ್ನೂ ಸ್ವಚ್ಛ ಮಾಡಿದ್ದೇನೆ. ಬೊಕ್ಕ ಪಟ್ಣ ಶಾಲೆಯಲ್ಲಿ ಮಕ್ಕಳು ಗಲೀಜು ಮಾಡಿದನ್ನು ಹಿಡಿಸೂಡಿ ಹಿಡಿದು ತೊಳೆದಿದ್ದೇನೆ. ಅವರೂ ಈ ರೀತಿ ಸ್ವಚ್ಛ ಮಾಡಲಿ ಎಂದು ಪೂಜಾರಿ ಹೇಳಿದರು.

ಲೋಕಾಯುಕ್ತ ಭಾಸ್ಕರ್ ರಾವ್ ರಾಜೀನಾಮೆ ನೀಡಲಿ

ಭಾಸ್ಕರ್ ರಾವ್ ಲೋಕಾಯುಕ್ತ ಹುದ್ದೆಯ ಪಾವಿತ್ರೃತೆಯನ್ನು ಸರ್ವನಾಶ ಮಾಡಿದ್ದಾರೆ. ತಮ್ಮ ಮಗನ ಪರವಾದಿಸುವುದುನ್ನು ಬಿಟ್ಟು ತಮ್ಮ ಸ್ಥಾನನ್ನು ಬಿಟ್ಟು ಕೊಡಬೇಕು. ರಾಜ್ಯ ಸರ್ಕಾರ ಅವರ ಮಗನ ಮೇಲೆ ಎಫ್‍ಐಆರ್ ಹಾಕಿ ಅರೆಸ್ಟ್ ಮಾಡಬೇಕು. ಸಂಪೂರ್ಣ ಪ್ರಕರಣವನ್ನೇ ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಜನಾರ್ದನ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಧೈರ್ಯ ತೋರಿಸಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇದರಿಂದ ರಾಜ್ಯ ಸರ್ಕಾರಕ್ಕಾಗಲೀ ಮುಖ್ಯಮಂತ್ರಿಗಾಗಲೀ ಏನೂ ತೊಂದರೆಯಾಗುವುದಿಲ್ಲ. ತಾವು ಪ್ರಾಮಾಣಿಕರೆಂದು ರಾಜ್ಯದ ಎಲ್ಲಾ 6 ಕೋಟಿ ಜನರಿಗೆ ಗೊತ್ತು ಎಂದು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕಾಯುಕ್ತ ಎಸ್‍ಪಿ ಸೋನಿಯಾ ನಾರಂಗ್ ಮೇಲೆ ಎಫ್‍ಐಆರ್ ಹಾಕಲು ಹೊರಟಿರುವ ಕ್ರಮವನ್ನು ಟೀಕಿಸಿದ ಅವರು, ಲೋಕಾಯುಕ್ತ ಮಗನ ಮೇಲೆ ಎಫ್‍ಐಆರ್ ಹಾಕಿಲ್ಲ ಎಂದು ನಾರಂಗ್ ಮೇಲೆ ಎಫ್‍ಐಆರ್ ಹಾಕುವುದು ಸರಿಯಲ್ಲ. ಅದೊಂದು ಸಣ್ಣ ವಿಚಾರ ಕಾಂಗ್ರೆಸ್ ಅಂತಹ ದಕ್ಷ ಅಧಿಕಾರಿಯ ಪರವಿರಬೇಕು ಎಂದರು.

ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿ-ಜೆಡಿಎಸ್ ಯಾವುದೇ ಪ್ರಕರಣವನ್ನು ಸಿಬಿಐಗೆ ವಹಿಸಲಿಲ್ಲ. ಸಿಬಿಐಯನ್ನು ಟೀಕಿಸಿದ್ದ ಅವರಿಗೆ ಈಗ ಪ್ರತಿಯೊಂದು ಪ್ರಕರಣಕ್ಕೂ ಸಿಐಬಿ ಯಾಕೆ ಬೇಕು ಎಂದು ಪ್ರಶ್ನಿಸಿದರು.

ತಮ್ಮ ಮೇಲಿನ ಪ್ರಕರಣವನ್ನು ಜನರ ಮನಸ್ಸಿನಿಂದ ತೆಗೆದು ಹಾಕಲು ಯಡಿಯೂರಪ್ಪ-ಕುಮಾರಸ್ವಾಮಿ ರೈತರಪರ ಹೋರಾಟ, ಪಾದಯಾತ್ರೆಯ ನಾಟಕವಾಡುತ್ತಿದ್ದಾರೆ. ಎಷ್ಟೇ ಹೋರಾಟ ಮಾಡಿದೂ ಜನರು ನಿಮ್ಮನ್ನು ನಂಬುವುದಿಲ್ಲ. ಮೊದಲು ನಿಮ್ಮ ಮೇಲೆ ದಾಖಲಾಗಿರುವ ಪ್ರಕರಣದಿಂದ ಹೊರಬರುವ ಬಗ್ಗೆ ಯೋಚಿಸಿ ಎಂದು ಕಿವಿ ಮಾತು ಹೇಳಿದರು.

ರೈತರ ಆತ್ಮಹತ್ಯೆಗೆ ಕೇಂದ್ರ ಸರ್ಕಾರವೂ ಜವಾಬ್ದಾರಿ. ದೇಶದಲ್ಲಿ ಹೆಚ್ಚಿನ ರೈತರು ಸಾಲದಲ್ಲಿದ್ದಾರೆ. ಹಿಂದೆ ಯುಪಿಎ ಸರ್ಕಾರವಿದ್ದಾಗ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಕಬ್ಬು ಬೆಳೆಗಾಗರರಿಗೆ ಮಾತ್ರ ಸಮಸ್ಯೆಯಲ್ಲ. ಹೆಚ್ಚಿನ ರೈತರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯ ಬಗ್ಗೆ ಕೇಂದ್ರ ಯೋಚಿಸಬೇಕು ಎಂದರು.

 ಸುದ್ದಿಗೋಷ್ಟಿಯಲ್ಲಿ ಅವರೊಂದಿಗೆ ಕಾಂಗ್ರೆಸ್ ನಾಯಕರಾದ ಕೇಶವ ಕೋಟ್ಯಾನ್, ಹರೀಶ್ ಕಿಣಿ, ಕೖಷ್ಣರಾಜ ಸರಳಾಯ ಮುಂತಾದವರಿದ್ದರು.


Spread the love