ಉಡುಪಿ: ಬಸ್ಸುಗಳ ನಡುವೆ ಅಫಘಾತ; ಇಬ್ಬರು ಮಹಿಳೆಯರಿಗೆ ತೀವ್ರ ಗಾಯ

Spread the love

ಉಡುಪಿ: ಎರಡು ಬಸ್ಸುಗಳ ನಡುವೆ ನಡೆದ ಅಫಘಾತದಲ್ಲಿ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ಕಿನ್ನಿಮೂಲ್ಕಿ ಬಳಿ ನಡೆದಿದೆ.

1 2 3 4 5 6

ಕಟಪಾಡಿಯಿಂದ ಉಡುಪಿ ಕಡೆಗೆ ಬರುತ್ತಿದ್ದ ಬಸ್ಸು, ಕಿನ್ನಿಮೂಲ್ಕಿ ಬಳಿ ತಲುಪಿದ ವೇಳೆ ಬಸ್ ನಿಲ್ದಾಣದಲ್ಲಿ ಜನರನ್ನು ಇಳಿಸಿ ಬಲಕ್ಕೆ ತಿರುಗಿ ಮುಂದೆ ಹೋಗಲು ಸಿದ್ದವಾಗುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಬಸ್ಸು ಡಿಕ್ಕಿ ಹೊಡೆದ್ದಿದ್ದು ಇದರಿಂದ ಬಸ್ಸಿನಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರಿಗೆ ತೀವ್ರವಾದ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಗೊಂಡ ಮಹಿಳೆಯರ ವಿವರ ಇದುವರೆಗೆ ಲಭ್ಯವಾಗಿಲ್ಲ.
ಸ್ಥಳಕ್ಕೆ ನಗರ ಟ್ರಾಫಿಕ್ ಪೋಲಿಸರು ಆಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.


Spread the love