ಉಡುಪಿ: ಯಶಸ್ವಿ  ಪರ್ಯಾಯ ನಿರ್ವಹಣೆ ; ಉಪ್ಪಾ ದಿಂದ ಎಸ್‍ಪಿ ಕೆ.ಅಣ್ಣಾಮಲೈ ಯವರಿಗೆ ಅಭಿನಂದನೆ

Spread the love

ಉಡುಪಿ: ಪೇಜಾವರ ಐತಿಹಾಸಿಕ ಪರ್ಯಾಯಕ್ಕೆ ಗಣ್ಯರ ದಂಡೇ ಉಡುಪಿಯಲ್ಲಿತ್ತು. ಪರ್ಯಾಯದ ಸಂಭ್ರಮಕ್ಕೆ ಲಕ್ಕಕ್ಕೂ ಮಿಕ್ಕಿ ಜನ ಸೇರಿದ್ದರು. ಈ ಜನ ಜಂಗುಲಿಯಲ್ಲಿ ಯಾವುದೇ ರೀತಿಯ ಗಲಾಟೆ, ದೊಂಬಿ ಹಾಗು ಕಳ್ಳತನ ನಡೆಯಲಿಲ್ಲ. ಸಂಚಾರ ವ್ಯವಸ್ಥೆ ಅಚ್ಚುಕಟ್ಟಾಗಿ ಇಲಾಖೆ ನಿರ್ವಹಿಸಿತ್ತು.

Sp  (5) Sp  (7)

ಅತ್ಯಂತ ಉತ್ತಮ ರೀತಿಯಲ್ಲಿ ಮತ್ತು ಜನಸಮಾನ್ಯರಿಗೆ ಯಾವುದೇ ಕಿರಿಕಿರಿ ಇಲ್ಲದೆ ಪೊಲೀಸ್ ಇಲಾಖೆ ಯಶಸ್ವಿಯಾಗಿ ತನ್ನ ಕೆಲಸವನ್ನು ನಿರ್ವಹಿಸಿದಕ್ಕೆ ಉಡುಪಿ ಜಿಲ್ಲಾ ಪ್ರೆಸ್ ಫೋಟೋಗ್ರಾಫರ್ ಅಸೋಸಿಯೇಶನ್ ವತಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಅಣ್ಣಾಮಲೈ ಹಾಗು ಅವರ ತಂಡಕ್ಕೆ ಅಭಿನಂದನಾ ಪತ್ರವನ್ನು ನೀಡಿ, ಇಲಾಖೆಯ ಕಾರ್ಯತಂತ್ರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿತು.

ಅಭಿನಂದನೆ ಸ್ವೀಕರಿಸಿದ  ಕೆ.ಅಣ್ಣಾಮಲೈ ಮಾತನಾಡುತ್ತಾ ಉಡುಪಿ ಜನತೆಯ ಸಹಕಾರದಿಂದ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಪರ್ಯಾಯೋತ್ಸವ ಜರಗಿತು. ಝಡ್ ಪ್ಲಸ್ ಗಣ್ಯರನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ನಮಗೂ ಒಂದು ಸವಾಲಿತ್ತು. ಉಡುಪಿ ಜಿಲ್ಲಾಧಿಕಾರಿ ಡಾ| ವಿಶಾಲ್ ಅವರ ಮಾರ್ಗದರ್ಶನ ಮತ್ತು ಚಿಕ್ಕಮಗಳೂರು ಎಸ್‍ಪಿ ಕೆ.ಸಂತೋಷ್ ಬಾಬು ರವರ ಸಹಕಾರ ಉತ್ತಮವಾಗಿತ್ತು ಎಂದರು.

ಈ ಸಂದರ್ಭದಲ್ಲಿ   ಅಡಿಶನಲ್ ಎಸ್‍ಪಿ ಸಂತೋಷ್ ಕುಮಾರ್, ಉಪ್ಪಾ ಅಧ್ಯಕ್ಷ ಜನಾರ್ದನ್ ಕೊಡವೂರು, ಕೋಶಾಧಿಕಾರಿ ಆಸ್ಟ್ರೋಮೋಹನ್, ಕಾರ್ಯದರ್ಶಿ ಗಣೇಶ್ ಕಲ್ಯಾಣಪುರ, ಶರತ್ ಕಾನಂಗಿ ಕಾರ್ಕಳ ಹಾಗು ಅನಂತಕೃಷ್ಣ ಭಾಗವತ್ ಉಪಸ್ಥಿತರಿದ್ದರು.


Spread the love

1 Comment

Comments are closed.