ಉಡುಪಿ: ಲಾಕ್ ಡೌನ್ ಆದೇಶ ಉಲ್ಲಂಘಿಸಿದ 6 ಮಂದಿ ವಿರುದ್ದ ಪ್ರಕರಣ ದಾಖಲು

ಉಡುಪಿ: ಲಾಕ್ ಡೌನ್ ಆದೇಶ ಉಲ್ಲಂಘಿಸಿದ 6 ಮಂದಿ ವಿರುದ್ದ ಪ್ರಕರಣ ದಾಖಲು

ಉಡುಪಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಸೆಕ್ಷನ್ 144 ಹಾಗೂ ಈ ಸಂಬಂಧ ಹೊರಡಿಸಿರುವ ಇತರೆ ಆದೇಶಗಳನ್ನು ಉಲ್ಲಂಘಿಸಿದವರ ವಿರುದ್ದ ಉಡುಪಿ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳ ದಾಖಲಾಗಿದೆ.

ಜಿಲ್ಲೆಯ ಮಲ್ಪೆ, ಉಡುಪಿ ಹಾಗೂ ಅಮಾಸೆಬೈಲು ಪೊಲೀಸ್ ಠಾಣೆಗಳಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘಿಸಿದ 6 ಮಂದಿಯ ವಿರುದ್ದ ಪ್ರಕರಣಗಲು ದಾಖಲಾಗಿದೆ.

ಮೊದಲ ಪ್ರಕರಣದಲ್ಲಿ ಉಡುಪಿ ತಾಲೂಕಿನ ಹೂಡೆ ಪಡು ತೋನ್ಸೆ ವ್ಯಾಪ್ತಿಯಲ್ಲಿ ಫಾರೀಸ್ ಹೈದರ್ (31), ಅಫ್ವಾನ್ ಬಿ (25) ಮತ್ತು ತಾಹೀರ್ ಅಬ್ಬಾಸ್ (58) ಎಂಬವರು ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಸೆಕ್ಷನ್ 144 ಹಾಗೂ ಈ ಸಂಬಂಧ ಹೊರಡಿಸಿರುವ ಇತರೆ ಆದೇಶಗಳಿದ್ದರೂ ಸಹ ಕೆಮ್ಮಣ್ಣು ಮುಖ್ಯ ರಸ್ತೆಯಲ್ಲಿ ಕಾರು ನಂಬ್ರ ಕೆ ಎ 19 ಎಂ ಎ 7740 ನೇಯದರಲ್ಲಿ ಕಾರಿನಲ್ಲಿ ಪದೇ ಪದೇ ಕೆಮ್ಮಣ್ಣು, ಹೂಡೆ, ಸಂತೆಕಟ್ಟೆ ಕಡೆ ಸಂಚರಿಸಿಕೊಂಡಿದ್ದು ಅನಾವಶ್ಯಕವಾಗಿ ಪರಿಸರದಲ್ಲಿ ತಿರುಗಾಡಬಾರದಾಗಿ ಸೂಚನೆಯನ್ನು ನೀಡಿದರೂ ಸಹ ಪಾಲಿಸದೇ ಇದ್ದು ಇವರುಗಳ ವಿರುದ್ದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮಲ್ಪೆ ಠಾಣೆಗೆ ದೂರು ನೀಡಿದ್ದು ಅದರಂತೆ ಇವರುಗಳ ವಿರುದ್ದ ಸೆಕ್ಷನ್ 269,188 ಹಾಕಿದ್ದು ಪ್ರಕರಣ ದಾಖಲಾಗಿದೆ.

ಎರಡನೇ ಪ್ರಕರಣದಲ್ಲಿ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗರಾಜ್ ಪೂಜಾರಿ ಎಂಬ ವ್ಯಕ್ತಿ ಜಿಲ್ಲಾಧಿಕಾರಿಗಳ ಲಾಕ್ ಡೌನ್ ಆದೇಶ ಪಾಲಿಸುವಂತೆ ಸೂಚನೆ ನೀಡಿದಾಗ ಅಮಾಸೆಬೈಲು ಠಾಣಾ ಉಪನಿರೀಕ್ಷಕ ಅನಿಲ್ ಕುಮಾರ ಟಿ ಎಂಬವರ ವಿರುದ್ದ ಅಸಭ್ಯವಾಗಿ ಮಾತನಾಡಿದ್ದಲ್ಲದೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಇತನ ವಿರುದ್ದ ಅಮಾಸೆಬೈಲು ಠಾಣೆಯಲ್ಲಿ ಸೆಕ್ಷನ್ 269 323, 324, 353 ದಾಖಲಾಗಿದೆ.

ಮೂರನೇ ಪ್ರಕರಣದಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಗಿರಿ ಜಂಕ್ಷನ್ ಬಳಿ ಅಂಬಲಪಾಡಿ ನಿವಾಸಿ ಜಯಪ್ರಕಾಶ್ (22) ಮತ್ತು ಆದಿಉಡುಪಿ ನಿವಾಸಿ ಮಹೇಶ್ (18) ಎಂಬವರು ಸೆಕ್ಷನ್ 144 ಆದೇಶವನ್ನು ಉಲ್ಲಂಘಿಸಿ ಬೈಕಿನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕೆಕೆ ಹಾಕುತ್ತಾ ಸವಾರಿ ಮಾಡಿಕೊಂಡು ಸಂಚರಿಸುತ್ತಿದ್ದು ಇವರ ವಿರುದ್ದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಅವರು ದೂರು ನೀಡಿದ್ದು ಇಬ್ಬರ ವಿರುದ್ದ 188,269 ಸಹಿತ 34 ಐಪಿಸಿ ಅಡಿಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

  Subscribe  
Notify of