ಉಡುಪಿ ವಾರ್ತಾ ಇಲಾಖೆಗೆ ಹೊಸ ಬಸ್ಸು; ಸಚಿವ ಪ್ರಮೋದ್ ಉದ್ಘಾಟನೆ

Spread the love

ಉಡುಪಿ ವಾರ್ತಾ ಇಲಾಖೆಗೆ ಹೊಸ ಬಸ್ಸು; ಸಚಿವ ಪ್ರಮೋದ್ ಉದ್ಘಾಟನೆ

ಉಡುಪಿ: ಜಿಲ್ಲಾ ವಾರ್ತಾ ಇಲಾಖೆಗೆ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನ ಮೇರೆಗೆ ಒದಗಿಸಲಾದ ನೂತನ ಬಸ್ಸನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರುಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಇಂದು ಮಣಿಪಾಲದಲ್ಲಿ ಜನಸಂಪರ್ಕ ಸಭೆಗೆ ಮುನ್ನ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನರಸಿಂಹ ಮೂರ್ತಿ, ಸದಸ್ಯರಾದ ಜನಾರ್ಧನ ಭಂಡಾರ್ಕರ್,ಗಣೇಶ್ ನೇರ್ಗೆ, ನಾರಾಯಣ ಕುಂದರ್, ತಹಸೀಲ್ದಾರ್ ಮಹೇಶ್ಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಜನಾರ್ಧನ್, ನಗರಸಭೆ ಪೌರಾಯುಕ್ತರಾದ ಮಂಜುನಾಥಯ್ಯ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.


Spread the love