ಉಡುಪಿ: ಸಾಲ ತೀರಿಸಲಾಗದೆ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Spread the love

ಉಡುಪಿ: ಸಾಲ ಭಾದೆ ತಾಳಲಾರದೆ ವ್ಯಕ್ತಿಯೋರ್ವರು ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

suicide_indrali_guruprasad 24-05-2015 10-52-51
ಮೃತಪಟ್ಟವರನ್ನು ಕಡೆಕಾರು ನಿವಾಸಿ ಗುರುಪ್ರಸಾದ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಮೃತ ಗುರುಪ್ರಸಾದ್ ಶೆಟ್ಟಿ ಭಾನುವಾರ ಸುಮಾರು 6 ಗಂಟೆಯ ಹೊತ್ತಿಗೆ ಮನೆಯಿಂದ ತೆರಳಿದ್ದು, ಇಂದ್ರಾಳಿ ಆಂಗ್ಲಮಾಧ್ಯಮ ಶಾಲೆಯ ಬಳಿ ಇರುವ ರೈಲ್ವೆ ಟ್ರಾಕ್‍ನಲ್ಲಿ ರೈಲು ಬರುತ್ತಿದ್ದ ವೇಳೆಯನ್ನು ನೋಡಿ ಜಿಗಿದು ಸಾವನಪ್ಪಿದ್ದಾರೆ. ಸ್ಥಳೀಯರು ಮೃತದೇಹವನ್ನು ಕಂಡು ಪೋಲಿಸರಿಗೆ ಸುದ್ದಿ ತಲುಪಿಸದ್ದು, ಮಣಿಪಾಲ ಪೋಲಿಸರು ಅಗಮಿಸಿ ದೇಹವನ್ನು ಶವಾಗಾರಕ್ಕೆ ಕಳುಹಿಸಲಾಗಿದೆ. ಮೃತರು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದು ತೀರಿಸಲು ಸಾಧ್ಯವಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಾಹಿತಿಗಳು ತಿಳಿಸಿವೆ.

ಮಣಿಪಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.


Spread the love