ಉಡುಪಿ: ಸೆಲೂನ್ ಸಿಬಂದಿಯ ಕೊಲೆ ಯತ್ನ ಪ್ರಕರಣ, ಬಾಲಕ ಸಹಿತ ನಾಲ್ವರ ಬಂಧನ

Spread the love

ಉಡುಪಿ: ಸೆಲೂನ್ ಸಿಬಂದಿಯ ಕೊಲೆ ಯತ್ನ ಪ್ರಕರಣ, ಬಾಲಕ ಸಹಿತ ನಾಲ್ವರ ಬಂಧನ

ಉಡುಪಿ: ಸೆಲೂನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನನ್ನು ತಲವಾರು ಮೂಲಕ ದಾಳಿ ನಡೆಸಿ ಕೊಲೆಗೆ ಯತ್ನ ನಡೆಸಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಬಡಗುಬೆಟ್ಟುವಿನ ಪ್ರವೀಣ್‌(22), ಕಟಪಾಡಿಯ ಅಭಿಷೇಕ್‌(28), ಪುತ್ತೂರು ಗ್ರಾಮದ ದೇಶ್ ರಾಜ್(18) ಎನ್ನಲಾಗಿದೆ. ಇನ್ನೊಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಿಚಾರಣೆ ನಡೆಸಿ ಕಾನೂನಿನಂತೆ ಕ್ರಮ ಜರುಗಿಸಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ

ಪುತ್ತೂರು ಸಲೂನ್‌ ನಲ್ಲಿ ನೌಕರನಾಗಿರುವ ಚರಣ್‌ ಎಂಬಾತ ಶಬರಿ ಎಂಬಾತನಿಗೆ ಬೈದಿದ್ದ ಎನ್ನಲಾಗಿದೆ ಇದೇ ವಿಚಾರವಾಗಿ ಪ್ರವೀಣ್ ಗ್ಯಾಂಗ್‌ ಚರಣ್‌ ನನ್ನು ಮಾತುಕತೆಗೆಂದು ಪುತ್ತೂರಿನ ಬಿರಿಯಾನಿ ಪಾಯಿಂಟ್‌ ಬಳಿ ಕರೆದಿದೆ. ಅದರಂತೆ ಚರಣ್‌ ತನ್ನ ಮೂವರು ಸ್ನೇಹಿತರೊಂದಿಗೆ ಪುತ್ತೂರಿಗೆ ಬಂದಿದ್ದ. ಇದೇ ವೇಳೆ ಪ್ರವೀಣ್‌ ಗ್ಯಾಂಗ್‌ ಮಾತುಕತೆಗೆಂದು ಬಂದ ಚರಣ್‌ ಮತ್ತು ಸ್ನೇಹಿತರ ಮೇಲೆ ತಲವಾರಿನಿಂದ ದಾಳಿ ನಡೆಸಲು ಯತ್ನಿಸಿದೆ ಇದನ್ನು ಕಂಡ ಚರಣ್ ಮತ್ತು ಸ್ನೇಹಿತರು ಬೈಕ್ ಅಲ್ಲೇ ಬಿಟ್ಟು ಪ್ರವೀಣ್ ಗ್ಯಾಂಗ್ ನಡೆಸಿದ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಇದಾದ ಬಳಿಕ ಪ್ರವೀಣ್ ಗ್ಯಾಂಗ್ ಚರಣ್ ಹಾಗೂ ಸ್ನೇಹಿತರು ಬಿಟ್ಟು ಹೋದ ಬೈಕ್ ಹಾಗೂ ಸ್ಕೂಟಿಯನ್ನು ಪುಡಿಗೈದಿದ್ದರು.

ಈ ಕುರಿತು ಪ್ರಕರಣ ದಾಖಲಾಗಿತ್ತು ಅದರಂತೆ ಪೊಲೀಸರು  ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


Spread the love