ಉಡುಪಿ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯುವ ಕಾಂಗ್ರೆಸ್‌ ಕಾರ್ಯಕರ್ತರ ಸಮ್ಮೇಳನ ಮತ್ತು ನೃತ್ಯ ಸ್ಪರ್ಧೆ

Spread the love

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಚಿಟ್ಪಾಡಿ ದೇವಾಡಿಗರ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಯುವ ಕಾಂಗ್ರೆಸ್‌ ಕಾರ್ಯಕರ್ತರ ಸಮ್ಮೇಳನ ಮತ್ತು ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

1 2 3 4 6 7

ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ನೆರವೇರಿಸಿ ಸಂಸತ್‌ ಕಲಾಪ ನಡೆಸಲು ಬಿಟ್ಟರೆ ನಾವು ಚರ್ಚೆಗೆ ಸಿದ್ದರಿದ್ದೇವೆ ಎಂದು ಕೇಂದ್ರ ಬಿಜೆಪಿ ಸರಕಾರ ಹೇಳಿಕೊಂಡಿತು. ಆದರೆ ನಮಗೆ ಬೇಕಾಗಿರುವುದು ಚರ್ಚೆ ಅಲ್ಲ, ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಉತ್ತರ. ಆದರೆ ಅವರು ಉತ್ತರ ಕೊಡಲು ಸಿದಟಛಿರಿರಲಿಲ್ಲ. ಆ ಕಾರಣದಿಂದ ಕಾಂಗ್ರೆಸ್‌ ಹೋರಾಟ ನಡೆಸಬೇಕಾಯಿತು. ಈಗ ಅವರಿಗೆ ನಮ್ಮ ಹೋರಾಟದ ಬಿಸಿ ಮುಟ್ಟಿದೆ. ಅದಕ್ಕಾಗಿ ಪ್ರಧಾನ ಮಂತ್ರಿ, ಸಚಿವರು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ

ಅಧ್ಯಕ್ಷತೆಯನ್ನು ಶಾಸಕ ಪ್ರಮೋದ್‌ ಮಧ್ವರಾಜ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ, ನಗರಸಭಾ ಅಧ್ಯಕ್ಷ ಪಿ.ಯುವರಾಜ್‌, ಕಾಂಗ್ರೆಸ್‌ ಮುಖಂಡರಾದ ಜನಾರ್ದನ ತೋನ್ಸೆ, ವರೋನಿಕಾ ಕರ್ನೆಲಿಯೊ, ಅಶೋಕ್‌ ಕುಮಾರ್‌ ಕೊಡವೂರು, ಎಂ.ಎ.ಗಫ‌ೂರ್‌, ಭುಜಂಗ ಶೆಟ್ಟಿ, ಕೇಶವ ಕುಂದರ್‌, ದಿನೇಶ್‌ ಪುತ್ರನ್‌, ನರಸಿಂಹ ಮೂರ್ತಿ, ಚಂದ್ರಶೇಖರ್‌ ಶೆಟ್ಟಿ, ಮುರಳಿ ಶೆಟ್ಟಿ, ಯುವ ಕಾಂಗ್ರೆಸ್‌ನ ಅಮೃತ್‌ ಶೆಣೈ, ಅಝೀಝ್ ಹೆಜಮಾಡಿ, ಸುನೀಲ್‌ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ಕ್ಷೇತ್ರ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಕಾಸ್‌ ಶೆಟ್ಟಿ ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


Spread the love