ಉಡುಪಿ ಹಿಂದೂ ಸಮಾಜೋತ್ಸವಕ್ಕೆ ಆಗಮಿಸಲು ಶರಣ್ ಪಂಪ್ವೆಲ್ ಗೆ ತಡೆ!

Spread the love

ಉಡುಪಿ ಹಿಂದೂ ಸಮಾಜೋತ್ಸವಕ್ಕೆ ಆಗಮಿಸಲು ಶರಣ್ ಪಂಪ್ವೆಲ್ ಗೆ ತಡೆ!

ಉಡುಪಿ: ಉಡುಪಿ ಶೌರ್ಯ ಜಾಗರಣಾ ಯಾತ್ರೆಗೆ ಆಗಮಿಸಲು ಉಡುಪಿ ಜಿಲ್ಲಾ ಪೊಲೀಸ್ ಶರಣ್ ಪಂಪ್ವೆಲ್ ಅವರಿಗೆ ನಿರ್ಭಂದ ಹೇರಿದೆ.

ಇತ್ತೀಚೆಗೆ ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ಶರಣ್ ವಿರುದ್ದ ದಾಖಲಿಸಿದ್ದರು. ಬಳಿಕ ನ್ಯಾಯಾಲಯದಿಂದ ಶರತ್ತು ಬದ್ದ ಜಾಮೀನು ಪಡೆದಿದ್ದು ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಶರಣ್ ಗೆ ಪೊಲೀಸರಿಂದ ತಡೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಡಾ| ಅರುಣ್ ಕೆ. ಮಾಹಿತಿ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಗೆ 60 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಶೌರ್ಯ ಜಾಗರಣ ಯಾತ್ರೆ ರಾಜ್ಯದಾದ್ಯಂತ ಸಂಚರಿಸಿ ಉಡುಪಿಯಲ್ಲಿ ಸಮಾರೋಪಗೊಳ್ಳುತ್ತಿರುವ ಹಿನ್ನಲೆಯಲ್ಲಿ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿತ್ತು.


Spread the love