ಉತ್ತಮ ಪುಸ್ತಕಗಳನ್ನು ಓದುವುದರಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣ : ಡಿ. ವೀರೇಂದ್ರ ಹೆಗ್ಗಡೆ

Spread the love

ಧರ್ಮಸ್ಥಳದಲ್ಲಿ ಬುಧವಾರ ಶಾಂತಿವನ ಟ್ರಸ್ಟ್‍ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಆಶ್ರಯದಲ್ಲಿ ಪ್ರಕಟಿಸಲಾದ ಜ್ಞಾನ ಸಿಂಧು (ಪ್ರಾಥಮಿಕ ಶಾಲೆ) ಮತ್ತು ಜ್ಞಾನ ಬಂಧು (ಪ್ರೌಢಶಾಲೆ) ಪುಸ್ತಕಗಳನ್ನು ಮಹೋತ್ಸವ ಸಭಾ ಭವನದಲ್ಲಿ ಕಾರ್ಪೋರೇಶನ್ ಬ್ಯಾಂಕ್‍ನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಎಸ್.ಆರ್, ಬನ್ಸಾಲ್ ಬಿಡುಗಡೆಗೊಳಿಸಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಸಕಲೇಶಪುರದ ಸಾಹಿತಿ ಗಿರಿಮನೆ ಶ್ಯಾಮರಾವ್ ಉಪಸ್ಥಿತರಿದ್ದರು.

ಬಿಂದುವಿನಲ್ಲಿ ಸಿಂಧುವನ್ನು ತುಂಬಿರುವ ನೈತಿಕ ಪುಸ್ತಕಗಳು ಆದರ್ಶ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುತ್ತವೆ. ಇಂತಹ ಉತ್ತಮ ಪುಸ್ತಕಗಳನ್ನು ಓದಿ ಅದರಲ್ಲಿರುವ ನೀತಿ-ನಿಯಮಗಳನ್ನು ಜೀವನದಲ್ಲಿ ಅನುಸರಿಸುವುದರಿಂದ ನಮ್ಮ ಉಜ್ವಲ ಭವವಿಷ್ಯವನ್ನು ರೂಪಿಸಿಕೊಳ್ಳಬಹುದು. ಉತ್ತಮ ಪುಸ್ತಕಗಳನ್ನು ಓದುವುದರಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಕಾರ್ಪೋರೇಶನ್ ಬ್ಯಾಂಕ್‍ನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಎಸ್.ಆರ್, ಬನ್ಸಾಲ್ ಹೇಳಿದರು.

DSC_7165 DSC_7168 DSC_7187

ಧರ್ಮಸ್ಥಳದಲ್ಲಿ ಬುಧವಾರ ಶಾಂತಿವನ ಟ್ರಸ್ಟ್‍ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಆಶ್ರಯದಲ್ಲಿ ಪ್ರಕಟಿಸಲಾದ ಜ್ಞಾನ ಸಿಂಧು (ಪ್ರಾಥಮಿಕ ಶಾಲೆ) ಮತ್ತು ಜ್ಞಾನ ಬಂಧು (ಪ್ರೌಢಶಾಲೆ) ಪುಸ್ತಕಗಳನ್ನು ಮಹೋತ್ಸವ ಸಭಾ ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹುಟ್ಟು-ಸಾವಿನ ಮಧ್ಯೆ ಇರುವ ಅಲ್ಪಾವಧಿಯಲ್ಲಿ ನಾವು ಸಾಧ್ಯವಾದಷ್ಟು ಮಾನವೀಯ ಮೌಲ್ಯಗಳೊಂದಿಗೆ ಸತ್ಕಾರ್ಯಗಳನ್ನು ಮಾಡಬೇಕು. ಇಂದಿನ ಮಕ್ಕಳು ಮುಂದಿನ ಸಮಾಜದ ಸಭ್ಯ, ಸುಸಂಸ್ಖøತ ನಾಗರಿಕರಾಗಿ ರೂಪುಗೊಳ್ಳಬೇಕು. ಪಾರದರ್ಶಕ ಜೀವನ ನಡೆಸಭೇಕು ಎಂದು ಅವರು ಸಲಹೆ ನೀಡಿದರು.

ಸಕಲೇಶಪುರದ ಸಾಹಿತಿ ಗಿರಿಮನೆ ಶ್ಯಾಮರಾವ್ ಶುಭಾಶಂಸನೆ ಮಾಡಿ ವಿಜ್ಞಾನದ ಹಿಂದೆ ಜ್ಞಾನದ ಪರಿಜ್ಞಾನವಿದ್ದಾಗ ಜೀವನ ಸಾರ್ಥಕವಾಗುತ್ತದೆ. ಸ್ವಾಭಾವಿಕ ಜ್ಞಾನ ನಶಿಸಿ ಹೋಗುತ್ತಿರುವ ಇಂದಿನ ಕಾಲದಲ್ಲಿ ಉತ್ತಮ ಪುಸ್ತಕಗಳನ್ನು ಓದಿ ನಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಕ್ಕಳೇ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸುವ ಹರಿಕಾರರಾಗಬೇಕು. ಆದುದರಿಂದ ಹಂಸಕ್ಷೀರ ನ್ಯಾಯದಂತೆ ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಮೈಗೂಡಿಸಿಕೊಂಡು ಜೀವನ ಮೌಲ್ಯಗಳನ್ನು ಅಳವಡಿಸಿ ಸಭ್ಯ, ಸುಸಂಸ್ಖøತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜೀವನದ ಸವಾಲುಗಳನ್ನು ಹಾಗೂ ಸಮಸ್ಯೆಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಆದರ್ಶ ಜೀವನ ನಡೆಸಬೇಕು ಎಂದು ಹೇಳಿದರು.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳಿಗೆ ನೈತಿಕ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.

ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಈ ವರೆಗೆ 38 ನೈತಿಕ ಪುಸ್ತಕಗಳ 16,89,400 ಪ್ರತಿಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿವೀಕ್ಷಣಾಧಿಕಾರಿ ಮಂಗಳೂರಿನ ರಾಧಾಕೃಷ್ಣ ಭಟ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.


Spread the love