ಉತ್ತರಾಖಂಡ್ ಯುವ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿಗಳ ಸಂವಾದ 

Spread the love

ಉತ್ತರಾಖಂಡ್ ಯುವ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿಗಳ ಸಂವಾದ 

ಮಂಗಳೂರು: ದಿನಾಂಕ 27-01-2020 ರಂದು ಉತ್ತರಾಖಂಡದಿಂದ ಸುಮಾರು 4 ದಿನಗಳ ಮಂಗಳೂರು ಪ್ರವಾಸಕ್ಕೆ ಆಗಮಿದ ಸುಮಾರು 50 ಜನ ಯುವಕರ ತಂಡ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ತಂಡ ದಿನಾಂಕ 24-01-2020 ಕ್ಕೆ ಮಂಗಳೂರಿಗೆ ಆಗಮಿಸಿ ಮಂಗಳೂರಿನ ಹಲವಾರು ಪ್ರಶಸ್ತಿ ಪುರಸ್ಕøತ ಸಂಘ ಸಂಸ್ಥೆಯನ್ನು ಭೇಟಿಯಾಗಿ ಆ ಸಂಸ್ಥೆಯ ಕಾರ್ಯವೈಕರಿಯ ಬಗ್ಗೆ ಆ ಸಂಸ್ಥೆಯ ಪದಾಧಿಕಾರಿಗಳಿಂದ ಮಾಹಿತಿ ಪಡೆದುದರ ಜೊತೆಗೆ ಸ್ಥಳಿಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿನೀಡಿದರು ಹಾಗೂ ಈ ಬಗ್ಗೆ ಜಿಲ್ಲಾಧಿಕಾರಿಗಳ ಮಾಹಿತಿ ಪಡೆದರು, ಈ ಸಂದರ್ಭದಲ್ಲಿ ಉತ್ತರಾಖಂಡ್ ನಿಂದ ಆಗಮಿಸಿದ ವಿಧ್ಯಾರ್ಥಿಗಳು ಕನ್ನಡ ಕಲಿತು ಕನ್ನಡದಲ್ಲಿ ಜಿಲ್ಲಾಧಿಕಾಗಿಗಳ ಜೊತೆ ಸಂವಾದ ನಡೆಸಿ ಜಿಲ್ಲಾಧಿಕಾರಿಗಳ ಪ್ರಶಂಶೆಗೆ ಪಾತ್ರರಾದರು, ಹಾಗೂ ಇಲ್ಲಿನ ಸಂಸೃತಿ ಆಚಾರ ವಿಚಾರ, ಬಗ್ಗೆ ಮಾಹಿತಿ ಪಡೆದರು, ಹಾಗು ಕರಾವಳಿ ಭಾಗದಲ್ಲಿನ ಶಿಕ್ಷಣವ್ಯವಸ್ತೆಯ ಬಗ್ಗೆ ಶ್ಲಾಘಣೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ತಮ್ಮ ಉತ್ತರಾಖಂಡ್ ನ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸಂವಾದ ಉತ್ತಮವಾಗಿ ಮೂಡಿ ಬಂತು.


Spread the love