Spread the love
ಉದ್ಯಾವರ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಐಟಿ ಅಧಿಕಾರಿಗಳ ದಾಳಿ
ಉಡುಪಿ: ಕಾಂಗ್ರೆಸ್ ಕಾರ್ಯಕರ್ತರೋರ್ವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಸಂಜೆ ದಾಳಿ ನಡೆಸಿದ್ದಾರೆ.
ಉದ್ಯಾವರ ಸಮೀಪದ ಕಟ್ಟೆಗುಡ್ಡೆ ನಿವಾಸಿ ಸದಾಶಿವ್ ಅಮೀನ್ ಅವರ ಮನೆಯ ಮೇಲೆ ಸ್ಥಳೀಯ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಸದಾಶಿವ್ ಅವರು ಒರ್ವ ಫೈನಾನ್ಸ್ ಮೆನೇಜರ್ ಆಗಿದ್ದು, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ವಿವಿಧ ಕಾರುಗಳಲ್ಲಿ ಬಂದ ಸ್ಥಳೀಯ ಅಧಿಕಾರಿಗಳು ಸದಾಶಿವ್ ಅವರ ಮನೆಯಲ್ಲಿ ಮನೆಯಲ್ಲೇ ಕೆಲವು ಗಂಟೆಗಳ ಕಾಲ ದಾಖಲೆ ಪರಿಶೀಲನೆ ನಡೆಸಿದ್ದು ಬಳಿಕ ಹೆಚ್ಚಿನ ವಿಚಾರಣೆಗೆ ಕಚೇರಿಗೆ ಕರೆದೊಯ್ದ ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಉಡುಪಿ ತಹಶಿಲ್ದಾರರ ಸಮ್ಮುಖದಲ್ಲಿ ಸದಾಶಿವ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಚುನಾವಣೆಯ ಹಿನ್ನಲೆಯಲ್ಲಿ ಈ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ದಾಳಿಯ ಸಮಯದಲ್ಲಿ ಚುನಾವಣಾ ಕರ್ತವ್ಯದ ವಾಹನದಲ್ಲಿ ಬಂದಿದ್ದ ಅಧಿಕಾರಿಗಳೂ ಕೂಡ ಭಾಗಿಯಾಗಿದ್ದರು.
Spread the love