ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಎಲ್ಲಾ 15 ಸ್ಥಾನಗಳನ್ನು ಗೆಲ್ಲಲಿದೆ – ಸದಾನಂದ ಗೌಡ

Spread the love

ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಎಲ್ಲಾ 15 ಸ್ಥಾನಗಳನ್ನು ಗೆಲ್ಲಲಿದೆ – ಸದಾನಂದ ಗೌಡ

ಉಡುಪಿ: ರಾಜ್ಯದಲ್ಲಿ ಘೋಷಣೆಯಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಎಲ್ಲಾ 15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಂದ್ರದ ರಸಗೊಬ್ಬರ ಖಾತೆ ಸಚಿವರಾದ ಡಿ ವಿ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅಕ್ಟೋಬರ್ 21 ಕ್ಕೆ ಉಪಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸರಕಾರ ರಚನೆಯಾದ ದಿನದಿಂದ ಚುನಾವಣೆಗೆ ಕೆಲಸ ಶುರು ಮಾಡಿದ್ದು, ಲೋಕಸಭಾ ಚುನಾವಣಾ ಫಲಿತಾಂಶ ಮೂಲಕ ಜನ ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ಕನಸು ಜನ ಕಂಡಿದ್ದು ಜೆಡಿಎಸ್ ಕಾಂಗ್ರೆಸ್ ಶಾಸಕರು ಅಯೋಗ್ಯ ಸರಕಾರವನ್ನು ತಿರಸ್ಕರಿಸಿದ್ದಾರೆ ಆದ್ದರಿಂದ ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.

ಶಾಸಕರ ಅನರ್ಹತೆ ವಿಚಾರದಲ್ಲಿ ಸೋಮವಾರ ಸುಪ್ರೀಮ್ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದ್ದು ಒಂದೇ ದಿನದಲ್ಲಿ ಎಲ್ಲವೂ ಇತ್ಯರ್ಥ ಆಗಬಹುದು. ನಾಮಪತ್ರ ಸಲ್ಲಿಸಲು ಇನ್ನೂ ಹಲವು ದಿನ ಬಾಕಿ ಇದೆ.ಕಾನೂನಿನ ಚೌಕಟ್ಟಿನಲ್ಲಿ ಶಾಸಕರಿಗೆ ಸಮಸ್ಯೆಗಳು ಆಗಿದ್ದು ಅನರ್ಹತೆ ಹೊಂದಿದವರೇ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಆಗುತ್ತದೆ. ಅನರ್ಹರು ಮೊದಲು ಬಿಜೆಪಿ ಸೇರುತ್ತಾರೆ. ಬಿಜೆಪಿ ಪಕ್ಷ ಆಮೇಲೆ ತೀರ್ಮಾನ ತೆಗೆದುಕೊಳ್ಳಲಿದ್ದು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದರೆ ಅವರು ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದಾರೆ ಎಂದರು.

ಕಾಂಗ್ರೆಸ್ ಜೊತೆ ಉಪಚುನಾವಣಾ ಮೈತ್ರಿ ಇಲ್ಲ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡದ್ದೇ ಆಶ್ಚರ್ಯವಾಗಿದ್ದು ಒಂದು ಕಾಲದಲ್ಲಿ ಅವರಪ್ಪ- ಇವರಪ್ಪ ಅಂತ ಬೈದುಕೊಂಡವರು ಒಂದಾದದ್ದು ಆಶ್ಚರ್ಯವೇ ಸರಿ. ಅಧಿಕಾರಕ್ಕಾಗಿ ಮೈತ್ರಿಯಾದದ್ದು ಬಾಳಿಕೆ ಬರಲಿಲ್ಲ ಎರಡೂ ಪಕ್ಷದ ಸಜ್ಜನ ಶಾಸಕರು ಮೈತ್ರಿಯಿಂದ ನೊಂದು ಹೊರ ಬರಬೇಕಾಯಿತು ಎಂದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಡಿವಿಎಸ್ ಅಧಿಕಾರರಕ್ಕಾಗಿ ಜೆಡಿಎಸ್ ಕಾಂಗ್ರೆಸ್ ಏನು ಬೇಕಾದ್ರು ಮಾಡುತ್ತದೆ ಕುರ್ಚಿಗಾಗಿ ಅಂತಹ ಹೇಳಿಕೆ ಸಾಮಾನ್ಯವಾಗಿದ್ದು ಆಡಳಿತದ ಆಸೆ ಈ ಹೇಳಿಕೆ ಹೇಳಿಸಿರಬಹುದು ಎಂದರು.

ಸಿದ್ದರಾಮಯ್ಯ ಗೆ ಮತ್ತೆ ಸಿಎಂ ಆಗುವ ಆಸೆ, ಅವರಿಗೆ ಯಾವುದಾದರೂ ಕುರ್ಚಿ ಬೇಕೆ ಬೇಕು. ಮೊದಲು ಕುಮಾರಸ್ವಾಮಿ ಯನ್ನು ಇಳಿಸಿ ಕುರ್ಚಿ ಹಿಡಿದುಕೊಂಡರು. ಸೋನಿಯಾ ಭೇಟಿಗೆ ದೆಹಲಿಗೆ ಹೋದರೆ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ಕೊಡಲಿಲ್ಲ ಅಧಿಕಾರಕ್ಕಾಗಿ ಸಿದ್ದರಾಮಯ್ಯ ಗೆ ಎಲ್ಲಾ ಪಕ್ಷಕ್ಕೆ ಹೋಗಿ ಬಂದರು ಆದರೆ ಬಿಜೆಪಿಯಲ್ಲಿ ಸಿದ್ದರಾಮಯ್ಯ ಗೆ ಪ್ರವೇಶವಿಲ್ಲ ಎಂದರು.

ಇಡಿ ಬಲೆಯಲ್ಲಿ ಡಿಕೆಶಿ ವಿಚಾರದಲ್ಲಿ ತನಿಖೆ ನಡೆಯುವಾಗ ನಾನು ಮಾತನಾಡಲ್ಲ ಎಂದ ಅವರು ತಪ್ಪುಮಾಡಿದವರ ಮೇಲೆ ಕಾರ್ಯಾಚರಣೆ ನಡೆಯಲೇಬೇಕು. ನಾನು ತನಿಖಾ ಸಂಸ್ಥೆ ಅಲ್ಲ ಒಂದು ವೇಳೆ ಬಿಜೆಪಿಯವರು ತಪ್ಪು ಮಾಡಿದ್ರೂ ಅವರ ಮೇಲೆ ಕಾರ್ಯಾಚರಣೆ ಆಗಲಿ. ಯಾರು ತಪ್ಪು ಮಾಡಿದ್ದಾರೆ ಅಂತ ತನಿಖಾ ಸಂಸ್ಥೆ ನಿರ್ಧರಿಸುತ್ತದೆ. ಆಡಳಿತ ಪಕ್ಷದ ಮೇಲೆ ಆರೋಪ ಮಾಡೂದು ಸುಲಭ ಆರೋಪ ಸಾಭೀತು ಪಡಿಸುವುದು ಸವಾಲಿನ ಕೆಲಸ ಎಂದುರು.


Spread the love