ಉಪ್ಪಿನಂಗಡಿ : ತಾಯಿ ಮಗು ನಾಪತ್ತೆ 

Spread the love

ಉಪ್ಪಿನಂಗಡಿ : ತಾಯಿ ಮಗು ನಾಪತ್ತೆ 

ಮಂಗಳೂರು: ತಾಯಿ ಮತ್ತು ಮಗು ಮನೆಯಿಂದ ಹೊರಗೆ ಹೋದವರು ಮರಳಿ ಬಾರದೆ ನಾಪ್ತೆಯಾದ ಕುರಿತು ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜನವರಿ 8 ರಂದು ಬೆಳಿಗ್ಗೆ 6 ಗಂಟೆಗೆ ಪುತ್ತೂರು ತಾಲೂಕು ಶಿರಾಡಿ ಗ್ರಾಮದ ತೆಕ್ಕೆಕೆರೆ ಪುತ್ತನ್ಪುರ ಅಡ್ಡಹೊಳೆ ಎಂಬಲ್ಲಿನ ನಿವಾಸಿ. ಜೆಸ್ಲಿನ್  ಮತ್ತು ಮಗಳು ಲಿಯೊನಾ ಎಂಬವರು ರೂ. 12,000/- ಹಾಗೂ ಚಿನ್ನವನ್ನು ತೆಗೆದುಕೊಂಡು ಹೋಗಿದ್ದು  ವಾಪಾಸು ಮನೆಗೆ ಬಾರದೆ ಕಾಣದಾಗಿರುತ್ತಾರೆ.

ಜೆಸ್ಲಿನ್ ಪ್ರಾಯ 23 ವರ್ಷ, ಎತ್ತರ 5.2, ಮೈಬಣ್ಣ ಗೋದಿ ಮೈ ಬಣ್ಣ, ಹಸಿರು ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಇರುವ ಚೂಡಿದಾರ ಧರಿಸಿದ್ದು, ತುಳು, ಕನ್ನಡ, ಮಲಯಾಳಂ, ಮಾತನಾಡುತ್ತಾಳೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಪ್ಪಿನಂಗಡಿ ಪೊಲೀಸು ಠಾಣೆ ದೂರವಾಣಿ ಸಂಖ್ಯೆ: 08251-251055 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

 


Spread the love