ಉಪ್ಪಿನಂಗಡಿ ಪೋಲಿಸರಿಂದ ಆರು ಮಂದಿ ಹೆದ್ದಾರಿ ದರೋಡೆಕೋರರ ಬಂಧನ

Spread the love

ಉಪ್ಪಿನಂಗಡಿ ಪೋಲಿಸರಿಂದ ಆರು ಮಂದಿ ಹೆದ್ದಾರಿ ದರೋಡೆಕೋರರ ಬಂಧನ

ಉಪ್ಪಿನಂಗಡಿ:ಬೈಕ್ ಸವಾರನೊಬ್ಬನನ್ನು ಲೂಟಿ ಮಾಡಿದ ಆರು ಮಂದಿ ಹೆದ್ದಾರಿ ದರೋಡೆಕೋರರ ತಂಡವನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಪ್ರದೀಪ್, ಗೌತಮ್, ನಾಗೇಶ್, ಶಿವರಾಮ್, ದಿನೇಶ್ ಮತ್ತು ಸಂಜುಕುಮಾರ್ ಎಂದು ಗುರುತಿಸಲಾಗಿದೆ.

ಉಪ್ಪಿನಂಗಡಿ ಪೋಲಿಸ್ ತಿಮ್ಮಪ್ಪ ನಾಯ್ಕ್ ಬೈಕ್ ಸವಾರನೋರ್ವನ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ಬಂದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದ್ದು, ಸಾರ್ವಜನಿಕರ ಸಹಾಯದಿಂದ ಆರು ಮಂದಿಯನ್ನು ಹಿಡಿದ ಪೋಲಿಸರು ಬಂಧಿತರಿಂದ ಟೋಯೊಟಾ ಇಟಿಯೆಸ್ ಕಾರು, ಮರದ ದೊಣ್ಣೆ, ತಲವಾರು, ಮೆಣಸಿನ ಪುಡಿಯ ಕಟ್ಟು, ಮತ್ತು ವಿವಿಧ ಕಂಪೆನಿಯ ನಾಲ್ಕು ಮೊಬೈಲ್ ಹಾಗೂ ರೂ 8500 ನಗದು ವಶಪಡಿಸಿ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.


Spread the love