ಉಪ್ಪಿನಂಗಡಿ: ಬೈಕ್‌ ಮಗುಚಿ ಬಿದ್ದು ಸಹಸವಾರ ಸಾವು

Spread the love

ಉಪ್ಪಿನಂಗಡಿ: ಬೈಕ್‌ ಮಗುಚಿ ಬಿದ್ದು ಸಹಸವಾರ ಸಾವು
 
ಉಪ್ಪಿನಂಗಡಿ: ಬೈಕೊಂದು ಜಾರಿ ಬಿದ್ದ ಪರಿಣಾಮ ಬೈಕ್‌ ಹಿಂಬದಿ ಸವಾರ ಮೃತಪಟ್ಟ ಘಟನೆ ಕರಾಯ ಗ್ರಾಮದ ಮರಿಪ್ಪಾದೆಯಲ್ಲಿ ಸೋಮವಾರ ಸಂಭವಿಸಿದೆ.

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲೋಲಿ ನಿವಾಸಿ ನಾರಾಯಣ ನಾಯ್ಕ (79) ಮೃತಪಟ್ಟವರು. ಮಗ ಉದಯ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಹಿಂಬದಿ ಸವಾರನಾಗಿ ಕಲ್ಲೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿತು.

ಉದಯ ಅವರೂ ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ವೆನಾÉಕ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪುತ್ತೂರು ಸಂಚಾರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love