ಉರಿ ಧಾಳಿಗೆ ಭಾರತೀಯ ಸೇನೆ ದಿಟ್ಟ ಪ್ರತಿಕಾರ ನೀಡಿದೆ : ಪೇಜಾವರ ಸ್ವಾಮೀಜಿ

Spread the love

ಉರಿ ಧಾಳಿಗೆ ಭಾರತೀಯ ಸೇನೆ ದಿಟ್ಟ ಪ್ರತಿಕಾರ ನೀಡಿದೆ : ಪೇಜಾವರ ಸ್ವಾಮೀಜಿ

ಉಡುಪಿ: ಉರಿ ಧಾಳಿಗೆ ಭಾರತೀಯ ಸೇನೆ ನೀಡಿರುವ ದಿಟ್ಟ ಪ್ರತಿಕಾರ ಶ್ಲಾಘನೀಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಅವರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಇದು ಭಾರತದ ಧೃಢವಾದ ಪ್ರತಿಕ್ರಿಯೆ ಆಗಿದ್ದು, ಮೋದಿ ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ. ಸೈನಿಕರ ಕಾರ್ಯಾಚರಣೆ ಮಹತ್ವದ್ದಾಗಿದ್ದು, ಮುತ್ಸದ್ದಿತನ ತೋರಿದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಕೆ ಅಭಿನಂದನೆ ಸಲ್ಲಲೇ ಬೇಕು.

ಆಮೇರಿಕಾ ಒಸಾಮಾ ಬಿನ್ ಲಾದೆನ್ ಮೇಲೆ ಧಾಳಿ ನಡೆಸಿದಂತೆ ಭಾರತವು ಕೂಡ ಉಗ್ರರ ಅಡಗು ದಾಣಗಳ ಮೇಲೆ ಧಾಳಿ ನಡೆಸಿ ಉಗ್ರರ ಹುಟ್ಟಡಗಿಸಿದೆ. ಆದರೆ ಪರಸ್ಪರ ದೇಶಗಳ ಯುದ್ದ ನಡೆಯುವ ಬದಲು ಪಾಕಿಸ್ತಾನ ತನ್ನ ಬುದ್ದಿ ಪರಿವರ್ತೆನೆ ಮಾಡಿಕೊಳ್ಳುವುದು ಉತ್ತಮ ಎಂದರು.

ಉಗ್ರರು ಸದಾ ಭಾರತದೊಂದಿಗೆ ಸದಾ ಬರ್ಬರವಾಗಿ ವರ್ತಿಸುತ್ತಾ ಬಂದಿದ್ದು, ಇದರಿಂದ ಭಾರತೀಯ ಸೈನಿಕರ ಸಹನೆಯ ಕಟ್ಟೆ ಒಡೆದಿದ್ದು ತಕ್ಕ ಉತ್ತರ ನೀಡಿದ್ದಾರೆ. ಆದರೂ ಪಾಕಿಗಳು ತನ್ನ ಮೊಂಡುವಾದ ಪ್ರದರ್ಶಿಸುತ್ತಾ ಇದ್ದು, ಅಣುಬಾಂಬ್ ಧಾಳಿಯ ಬಗ್ಗೆ ಮಾತನಾಡುತ್ತಾರೆ, ಆದರೆ ಅಂತಹ ಧಾಳಿ, ಯುದ್ದ ಘೋಷಣೆ ಎಲ್ಲ ಬೇಡ ಎಂದರು.

ಕಾವೇರಿ ಜಲವಿವಾದ ವಿಚಾರದಲ್ಲಿ ಮಾತನಾಡಿದ ಶ್ರೀಗಳು ನಾನು ಕೇಂದ್ರ ಸಚಿವೆ ಉಮಾಭಾರತಿಗೆ ಫೋನ್ ಮಾಡಿ ಕರ್ನಾಟಕಕ್ಕೆ ಅನ್ಯಾಯವಾಗಬಾರದು ಎಂದು ಹೇಳಿದ್ದು, ಎರಡು ರಾಜ್ಯಗಳಲ್ಲಿ ಹಿಂಸಾಚಾರ ನಡೆಯಬಾರದು ಎನ್ನುವುದು ನನ್ನ ಅಪೇಕ್ಷೆ ಎಂದರು.


Spread the love

1 Comment

  1. Other religious leaders are very silent – why? Are they sad because Pakistaan was attacked? Or, they do not want to say anything good about Sri Modiji?

Comments are closed.